Mysore
21
overcast clouds

Social Media

ಶನಿವಾರ, 18 ಜುಲೈ 2026
Light
Dark

3000 ರೂಗೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಈಗ ಸಚಿವೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತಿಂಗಳಿಗೆ 3000 ರೂ ಸಂಬಳಕ್ಕೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಅವರು ಶಾಸಕಿಯಾಗಿ ಆಯ್ಕೆಯಾಗಿ, ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ತಿಂಗಳಿಗೆ ಕೇವಲ 3000 ರೂ ಸಂಬಳಕ್ಕೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಪಶ್ಚಿಮ ಬಂಗಾಳದ ಆಸ್ಗ್ರಾಮ್‌ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿ ಇದೀಗ ಸುವೇಂದು ಸರ್ಕಾರದಲ್ಲಿ ಸಚಿವೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಗುಸ್ಕಾರ ಪುರಸಭೆ ನಿವಾಸಿಯಾಗಿರುವ ಮಾಝಿ, ಸಕ್ರಿಯ ರಾಜಕೀಯಕ್ಕೆ ಕಾಲಿಡುವ ಮೊದಲು ನಾಲ್ಕು ಮನೆಗಳಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಸಾಧಾರಣ ಹಿನ್ನೆಲೆ ಮತ್ತು ಬಲವಾದ ಸ್ಥಳೀಯ ಸಂಪರ್ಕಗಳಿಗಾಗಿ ಪ್ರಚಾರದ ಸಮಯದಲ್ಲಿ ಅವರ ಉಮೇದುವಾರಿಕೆ ಗಮನ ಸೆಳೆಯಿತು.

ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಮಾಝಿ, ನಾನು ತುಂಬಾ ಸಂತೋಷವಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಕೃತಜ್ಞನಾಗಿದ್ದೆನೆ. ನಾನು ಇಂದು ನನ್ನ ಈ ಗೆಲುವನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡುತ್ತೇನೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಸರಿಯಾದ ರಸ್ತೆಗಳು ಮತ್ತು ಕುಡಿಯುವ ನೀರು ಎಲ್ಲರ ಮನೆಗಳಿಗೆ ತಲುಪುವಂತೆ ನೋಡಿಕೊಳ್ಳುವುದು ನನ್ನ ಮುಖ್ಯ ಗುರಿಯಾಗಿದೆ. ಯುವಕರ ಅಭಿವೃದ್ಧಿ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿಯೂ ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

 

Tags:
error: Content is protected !!