ಪುಣೆ: ಪುಣೆಯಲ್ಲಿ ಶಂಕಿತ ಜಿಬಿಎಸ್‌ಗೆ ಮೊದಲ ಬಲಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.
ಶಂಕಿತ ಜಿಬಿಎಸ್‌ಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಸೋಲಾಪುರದಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇದು ಶಂಕಿತ ಜಿಬಿಎಸ್‌ನಿಂದ ಮಹಾರಾಷ್ಟ್ರದಲ್ಲಿ ಸಂಭವಿಸಿದ ಮೊದಲ ಸಾವು ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ.
ಇನ್ನು ಪುಣೆಯ ಜಲ ಮೂಲಗಳಿಂದ ಸೋಂಕು ಹರಡಿಸುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ನೀರಿನ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪುಣೆಯ ಪ್ರಮುಖ ನೀರಿನ ಜಲಾಶಯವಾದ ಖಡಕ್ವಾಸ್ಲಾ ಅಣೆಕಟ್ಟಿನ ಬಳಿಯ ಬಾವಿಯಲ್ಲಿ ಇ ಕೋಲಿ ಬ್ಯಾಕ್ಟೀರಿಯಾದ ಮಟ್ಟ ಹೆಚ್ಚಾಗಿದೆ ಎಂದು ತೋರಿಸಲಾಗಿದೆ.
ಇನ್ನು ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಸಾವಿರಾರು ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಮಾಹಿತಿಯ ಪ್ರಕಾರ ಈ ಜಿಬಿಎಸ್ ಚಿಕಿತ್ಸೆ ತುಂಬಾ ದುಬಾರಿಯಾಗಿದ್ದು, ಪ್ರತಿ ಇಂಜೆಕ್ಷನ್‌ಗೆ 20,000 ವೆಚ್ಚವಾಗುತ್ತದೆ ಎಂದು ಹೇಳಲಾಗಿದೆ.
ಸೋಂಕಿತರಿಗೆ ದೇಹದ ಭಾಗಗಳಿಗೆ ಮೆದುಳಿನ ಸಂಕೇತಗಳನ್ನು ಸಾಗಿಸುವ ನರಗಳ ಮೇಲೆ ತಪ್ಪಾಗಿ ದಾಳಿ ಮಾಡಿ ದೌರ್ಬಲ್ಯ, ಪಾರ್ಶ್ವವಾಯು ಅಥವಾ ಇತರ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.