Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕೋವಿಡ್‌ ಕಾರಣದಿಂದ ಮುಂದೂಡಿಕೆಯಾಗಿದ್ದ ಜನಗಣತಿ ಸೆಪ್ಟೆಂಬರ್‌ನಿಂದ ಆರಂಭ

ಬೆಂಗಳೂರು: ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಗೆ ಅತ್ಯಂತ ಮಹತ್ವವಿದೆ.

ಕಳೆದ 2021ರಲ್ಲೇ ನಡೆಯಬೇಕಿದ್ದ ಜನಗಣತಿ ಕೋವಿಡ್‌ ಕಾರಣದಿಂದ ಮೂರುವರೆ ವರ್ಷ ತಡವಾಗಿದೆ. ಇದೀಗ 2024ರ ಸೆಪ್ಟೆಂಬರ್‌ನಲ್ಲಿ ಜನಗಣತಿ ಆರಂಭವಾಗಲಿದೆ.

ಜನಗಣತಿಗೆ 18 ತಿಂಗಳ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಜನಗಣತಿ ವರದಿಯು 2026ರ ಮಾರ್ಚ್‌ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಭಾರತದ ಜನರು ಮತ್ತು ಅವರ ಗುಣಲಕ್ಷಣಗಳ ಕುರಿತು ದತ್ತಾಂಶ ಸಹಿತ ಸಮಗ್ರವಾಗಿ ಲಭ್ಯವಾಗುವ ಏಕೈಕ ಮಾಹಿತಿಯೇ ಈ ಜನಗಣತಿ. ಜನಗಣತಿ ಸಂದರ್ಭದಲ್ಲಿ ಸಂಗ್ರಹಿಸುವ ಪ್ರತಿಯೊಬ್ಬರ ಮಾಹಿತಿಯು ಜನಸಂಖ್ಯೆಯ ಬೆಳವಣಿಗೆ ಮತ್ತು ಅದರ ಲಕ್ಷಣ ಹಾಗೂ ಬೆಳವಣಿಗೆಯ ಅಂದಾಜು ಲೆಕ್ಕಾಚಾರಕ್ಕೆ ನೆರವಾಗಲಿದೆ.

ವ್ಯಾಪಾರ ಕ್ಷೇತ್ರ ಹಾಗೂ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯ ಕುರಿತು ಯೋಜನೆ ರೂಪಿಸಲು ಜನಗಣತಿಯ ಮಾಹಿತಿ ಅಗತ್ಯ. ಹಣಕಾಸು ಆಯೋಗವು ಜನಗಣತಿಯ ಮಾಹಿತಿ ಆಧರಿಸಿಯೇ ಸರ್ಕಾರಕ್ಕೆ ಹಣ ಬಿಡುಗಡೆ ಮಾಡುತ್ತದೆ.

ದತ್ತಾಂಶ ಸಂಗ್ರಹದ ಆಧಾರದಲ್ಲಿ ಈ ಬಾರಿ ನಡೆಯಲಿರುವ ಜನಗಣತಿಯು ಈ ಹಿಂದಿನ ಗಣತಿಗಿಂತ ಭಿನ್ನವಾಗಿರಲಿದೆ ಎಂದೇ ಹೇಳಲಾಗುತ್ತಿದೆ.

 

Tags: