Mysore
22
scattered clouds

Social Media

ಶುಕ್ರವಾರ, 14 ಮಾರ್ಚ್ 2025
Light
Dark

ಏಕತೆಯ ಮಹಾಯಜ್ಞ ಪೂರ್ಣಗೊಂಡಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದಾಖಲೆಗಳೊಂದಿಗೆ ತೆರೆ ಕಂಡ ಐತಿಹಾಸಿಕ ಮಹಾಕುಂಭಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಈ ಏಕತೆಯ ಮಹಾಕುಂಭವನ್ನು ಯಶಸ್ವಿಗೊಳಿಸಲು ದೇಶವಾಸಿಗಳ ಕಠಿಣ ಪರಿಶ್ರಮ, ಪ್ರಯತ್ನಗಳು ಮತ್ತು ದೃಢಸಂಕಲ್ಪದಿಂದ ಪ್ರಭಾವಿತನಾಗಿದ್ದೇನೆ. ಹೀಗಾಗಿ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೇಯ ಜ್ಯೋತಿರ್ಲಿಂಗವಾದ ಶ್ರೀ ಸೋಮನಾಥನ ದರ್ಶನಕ್ಕೆ ಹೋಗುತ್ತೇನೆ. ಭಕ್ತಿಯ ಸಂಕೇತವಾಗಿ ಸಂಕಲ್ಪ ಪುಷ್ಪವನ್ನು ಅರ್ಪಿಸುವ ಮೂಲಕ ಪ್ರತಿಯೊಬ್ಬ ಭಾರತೀಯನಿಗಾಗಿ ಪ್ರಾರ್ಥಿಸುತ್ತೇನೆ. ದೇಶವಾಸಿಗಳಲ್ಲಿ ಈ ಏಕತೆಯು ನಿರಂತರವಾಗಿ ಇರಲಿ ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಈ ಮಹಾಕುಂಭಮೇಳದಲ್ಲಿ ಸಮಾಜದ ಪ್ರತಿಯೊಂದು ಸ್ಥರದ ಮತ್ತು ಪ್ರತಿಯೊಂದಯ ಕ್ಷೇತ್ರದ ಜನರು ಒಟ್ಟುಗೂಡಿದರು. ಏಕ ಭಾರತ ಶ್ರೇಷ್ಠ ಭಾರತದ ಈ ಅವಿಸ್ಮರಣೀಯ ದೃಶ್ಯವು ಕೋಟ್ಯಾಂತರ ದೇಶವಾಸಿಗಳಲ್ಲಿ ಆತ್ಮವಿಶ್ವಾಸದ ಮಹಾ ಹಬ್ಬವಾಯಿತು ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ.

ಇನ್ನು ಮಹಾಕುಂಭಮೇಳ ಮುಗಿದ ನಂತರ ನನ್ನ ಮನಸ್ಸಿಗೆ ಬಂದ ಆಲೋಚನೆಗಳನ್ನು ಬರೆಯಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದ್ದಾರೆ.

 

 

Tags: