ತೈಪೆ: ತೈವಾನ್‌ನಲ್ಲಿ ಇಂದು ( ಏಪ್ರಿಲ್ 3 ) ಬೆಳಗ್ಗೆ 9.4ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಅವಘಡದಲ್ಲಿ ಇಲ್ಲಿಯವರೆಗೂ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇನ್ನು ಕಳೆದ 25 ವರ್ಷಗಳಲ್ಲಿ ತೈವಾನ್‌ನಲ್ಲಿ ಉಂಟಾಗಿರುವ ಅತಿದೊಡ್ಡ ಭೂಕಂಪ ಇದಾಗಿದೆ. ಈ ಭೂಕಂಪಕ್ಕೆ ಪೂರ್ವ ಕರಾವಳಿಯ ಹುವಾಲಿಯನ್ ಕೌಂಟಿಯಲ್ಲಿ ಭಾರೀ ಹಾನಿಯುಂಟಾಗಿದೆ. ಅಲ್ಲಿನ ಹತ್ತು ಅಂತಸ್ತಿನ ಕಟ್ಟಡವೊಂದು ರಸ್ತೆಗೆ ವಾಲಿದ್ದು, ಇದರಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ ತೈವಾನ್ ಹಾಗೂ ಓಕಿನಾವಾ, ಜಪಾನ್ ಹಾಗೂ ಫಿಲಿಫೈನ್ಸ್‌ನಲ್ಲಿ ಸುನಾಮಿ ಮುನ್ನೆಚ್ಚರಿಕೆಯನ್ನೂ ಸಹ ನೀಡಲಾಗಿದೆ.





