Mysore
26
scattered clouds

Social Media

ಸೋಮವಾರ, 15 ಜೂನ್ 2026
Light
Dark

ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ

ಟೋಕಿಯೊ: ಸೋಮವಾರ ಜಪಾನ್ ಕೇಂದ್ರ ಭಾಗದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜಧಾನಿ ಟೋಕಿಯೊ ಸೇರಿದಂತೆ ಇತರೆ ನಗರಗಳಲ್ಲಿ ಕಂಪನದ ಅನುಭವವಾಗಿದೆ.
ಜಪಾನ್ ಕಾಲಮಾನ ಸಂಜೆ 5 ಗಂಟೆ ಸುಮಾರಿಗೆ ಆಗ್ನೇಯ ಭಾಗದ ಟೋಬಾದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಲ್ಲಿನ ಹವಾಮಾನ ಸಂಸ್ಥೆ ತಿಳಿಸಿದೆ. ಸಾರ್ವಜನಿಕ ಸುದ್ದಿವಾಹಿನಿ ಎನ್‌ಎಚ್‌ಕೆ ಪ್ರಕಾರ, ಫುಕುಶಿಮಾ ಪರಮಾಣು ಸ್ಥಾವರಗಳಲ್ಲಿ ಯಾವುದೇ ಹಾನಿ ಅಥವಾ ಗಾಯಗಳ ವರದಿ ಆಗಿಲ್ಲ.ಅಮೆರಿಕದ ಭೌಗೋಳಿಕ ಸಮೀಕ್ಷಾ ಸಂಸ್ಥೆಯು ಸಹ 6.1 ತೀವ್ರತೆಯ ಭೂಕಂಪ  ಸಂಭವಿಸಿರುವುದನ್ನು ಖಚಿತಪಡಿಸಿದೆ. ಭೂಕಂಪನದ ಕೇಂದ್ರದಿಂದ ನೂರಾರು ಕಿ.ಮೀ ದೂರದಲ್ಲಿದ್ದರೂ ಸಹ ಫುಕುಶಿಮಾ ಮತ್ತು ಇಬರಾಕಿ ಪ್ರಾಂತ್ಯಗಳು, ಉತ್ತರ ಟೋಕಿಯೊದಲ್ಲಿ ಭಾರಿ ಪ್ರಮಾಣದ ಅಲುಗಾಡಿದ ಅನುಭವವಾಗಿದೆ. ಆದರೆ, ಈವರೆಗೆ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಭೂಕಂಪದ ನಂತರ ಶಿಂಕನ್‌ಸೆನ್ ಬುಲೆಟ್ ರೈಲುಗಳು ಮತ್ತು ಟೋಕಿಯೊ ಮೆಟ್ರೋವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿ, ನಂತರ ಪುನರಾರಂಭಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!