Mysore
28
overcast clouds

Social Media

ಭಾನುವಾರ, 03 ಮೇ 2026
Light
Dark

ತಿಹಾರ ಜೈಲಿನಿಂದ ಹೊರಬಂದ ಅರವಿಂದ್‌ ಕೇಜ್ರಿವಾಲ್‌ : ನನ್ನ ಶಕ್ತಿ 100ಪಟ್ಟು ಹೆಚ್ಚಿದೆ ಎಂದ ದೆಹಲಿ ಸಿಎಂ

ನವದೆಹಲಿ: ಆರು ತಿಂಗಳ ಬಳಿಕ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಶುಕ್ರವಾರ ತಿಹಾರ್‌ ಜೈಲಿನಿಂದ ಹೊರಬಂದಿದ್ದಾರೆ. ಭಾರಿ ಮಳೆಯ ನಡುವೆಯು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿ ಸ್ವಾಗತ ಕೋರಿದರು.

ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನವಾಗಿದ್ದ ಅರವಿಂದ್‌ ಕೇಜ್ರಿವಾಲ್‌ಗೆ ಸರ್ವೋಚ್ಛ ನ್ಯಾಯಾಲಯವು ಶುಕ್ರವಾರ ಬೆಳಿಗ್ಗೆ ಜಾಮೀನು ಮಂಜೂರು ಮಾಡಿತ್ತು.

ಮಳೆಯಲ್ಲಿ ತನಗಾಗಿ ಕಾಯುತ್ತಿದ್ದ ಜನರಿಗೆ ಧನ್ಯವಾದ ತಿಳಿಸಿದ ಕೇಜ್ರಿವಾಲ್‌, ನನ್ನ ಪತ್ರಿ ರಕ್ತದ ಹನಿಯೂ ದೇಶಕ್ಕೆ ಸಮರ್ಪಿತವಾಗಿದೆ. ಜೈಲಿಗೆ ಹಾಕಿ ನನ್ನ ನೈತಿಕತೆ ಮುರಿಯಬಹುದು ಎಂದು ಅವರು ಭಾವಿಸಿದ್ದರು. ಆದರೆ, ನಾನು ಜೈಲಿನಿಂದ ಹೊರಬಂದ ನಂತರ ನನ್ನ ನೈತಿಕತೆ ಮತ್ತು ಶಕ್ತಿ 100ಪಟ್ಟು ಹೆಚ್ಚಾಗಿದೆ. ದೇಶವನ್ನು ವಿಭಜಿಸಲು ಸಂಚು ರೂಪಿಸುತ್ತಿರುವವರು ವಿರುದ್ಧ ಹೋರಾಡುತ್ತೇನೆ ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದರು.

Tags:
error: Content is protected !!