ನವದೆಹಲಿ: ಜಾಗತಿಕವಾಗಿ ಮಂಕಿಪಾಲ್ಸ್ ಪ್ರಕರಣಗಳ ಉಲ್ಬಣದ ನಡುವೆ ದೆಹಲಿಯ ಏಮ್ಸ್ ಆಸ್ಪತ್ರೆಯು ಪ್ರೋಟೋಕಾಲ್ ಬಿಡುಗಡೆ ಮಾಡಿದೆ.
ಶಂಖಿತ ಮಂಕಿಪಾಲ್ಸ್ ಹೊಂದಿರುವ ರೋಗಿಗಳನ್ನು ನಿರ್ವಹಿಸಲು ಏಮ್ಸ್ ಆಸ್ಪತ್ರೆ ಪ್ರೋಟೋಕಾಲ್ ಬಿಡುಗಡೆ ಮಾಡಿದ್ದು, ಮಂಕಿಪಾಲ್ಸ್ ಹರಡದಂತೆ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮಂಕಿಪಾಲ್ಸ್ ಒಂದು ವೈರಲ್ ಝೂನೋಸಿಸ್ ಆಗಿದ್ದು, ಸಿಡುಬು ರೋಗಿಗಳಲ್ಲಿ ಈ ಹಿಂದೆ ಕಂಡುಬರುವ ರೋಗಲಕ್ಷಣಗಳನ್ನು ಹೋಲುತ್ತದೆ. ಆದರೂ ಪ್ರಾಯೋಗಿಕವಾಗಿ ಇದು ಕಡಿಮೆ ತೀವ್ರವಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಲ್ಸ್‌ನ್ನು ಅಂತರಾಷ್ಟ್ರೀಯ ಕಾಳಜಿವ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.
ಈ ಹಿಂದೆ ಮಂಕಿಪಾಲ್ಸ್ ಎಂದು ಕರೆಯಲ್ಪಡುವ ಎಂಪಾಕ್ಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಅದು ಜ್ವರ, ತಲೆನೋವು ಹಾಗೂ ಸ್ನಾಯು ನೋವುಗಳನ್ನು ಉಂಟು ಮಾಡುತ್ತದೆ. ಇದರ ಜೊತೆಗೆ ಚರ್ಮದ ಮೇಲೆ ನೋವಿನ ಗುಳ್ಳೆಗಳನ್ನು ಉಂಟುಮಾಡುತ್ತದೆ. ಇದು ನಿಕಟವಾದ ಚರ್ಮದಿಂದ ಚರ್ಮದ ಸಂಪರ್ಕದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗ ಹರಡುತ್ತದೆ.
ಈ ಹಿನ್ನೆಲೆಯಲ್ಲಿ ಜನತೆ ಬಹಳ ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗ ಲಕ್ಷಣ ಕಂಡು ಬಂದರೆ ಕೂಡಲೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.