Mysore
21
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಶಾಕಿಂಗ್‌ ಮಾಹಿತಿ ಬಹಿರಂಗ: ಚೀನಾದ ಮಾರುಕಟ್ಟೆಯಲ್ಲಿದ್ದ ಪ್ರಾಣಿಗಳಿಂದ ಹರಡಿದ ಕೊರೊನಾ ಸೋಂಕು?

ಚೀನಾ: ಚೀನಾದ ಮಾರುಕಟ್ಟೆಯಿಂದಲೇ ಕೊರೊನಾ ಸೋಂಕು ಹರಡಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವರದಿ ಬಹಿರಂಗಗೊಂಡಿದೆ.

ಕಳೆದ 2019ರ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಮೊದಲು ಪತ್ತೆಯಾಗಿ ವಿಶ್ವವನ್ನು ಭಾರೀ ತಲ್ಲಣಗೊಳಿಸಿದ ಕೊರೊನಾ ಸೋಂಕು, ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಿತ್ತು.

ಈ ಕೊರೊನಾ ಸೋಂಕು ಹುಟ್ಟಿದ್ದು ಎಲ್ಲಿಂದ ಎಂಬ ಅನುಮಾನ ಎಲ್ಲರಲ್ಲೂ ಕಾಡತೊಡಗಿತ್ತು.

ಈ ಬಗ್ಗೆ ವರದಿಯೊಂದು ಬಿಡುಗಡೆಯಾಗಿದ್ದು, ಚೀನಾದ ವುಹಾನ್‌ ಪ್ರಾಂತ್ಯದಲ್ಲಿನ ಮಾರುಕಟ್ಟೆಯಿಂದ ಸೋಂಕು ಜನರಿಗೆ ಹರಡಿದೆ ಎಂದು ತಿಳಿದು ಬಂದಿದೆ.

ಮೊದಲು ಅಲ್ಲಿದ್ದ ಪ್ರಾಣಿಗಳಿಂದ ಉದ್ಯೋಗಿಗಳಿಗೆ ತಗುಲಿ, ಆನಂತರದಲ್ಲಿ ದೇಶವನ್ನು ವ್ಯಾಪಿಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ.

ಚೀನಾದ ಮಾರುಕಟ್ಟೆಯಲ್ಲಿ ಇರಿಸಿದ್ದ ವನ್ಯಜೀವಿಗಳಿಂದ ಕೊರೊನಾ ಸೋಂಕು ತಗುಲಿರಬಹುದು ಎಂದು ಹೇಳಲಾಗುತ್ತಿದೆ.

 

Tags:
error: Content is protected !!