Mysore
18
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ರಾಹುಲ್‌ ಗಾಂಧಿಗೆ 200ರೂ ದಂಡ ವಿಧಿಸಿದ ಕೋರ್ಟ್: ಕಾರಣ ಇಷ್ಟೇ

ಲಕ್ನೋ: ಮಹಾರಾಷ್ಟ್ರದಲ್ಲಿ ನಡೆದ 2022ರ ಭಾರತ್‌ ಜೋಡೋ ರ್ಯಾಲಿಯಲ್ಲಿ ಸಾರ್ವಕರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾದ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾಗದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಲಕ್ನೋದ ನ್ಯಾಯಾಲಯ 200ರೂಗಳ ದಂಡ ವಿಧಿಸಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಅಲೋಕ್‌ ವರ್ಮಾ ಈ ಆದೇಶ ಹೊರಡಿಸಿದ್ದಾರೆ. ಮಾರ್ಚ್.‌5ರಂದು ನ್ಯಾಯಾಲಯಕ್ಕೆ ಹಾಜರಾಗಲು ರಾಹುಲ್‌ ಗಾಂಧಿಗೆ ನೋಟಿಸ ಕಳುಹಿಸಲಾಗಿತ್ತು. ಆದರೆ ರಾಹುಲ್‌ ಗಾಂಧಿ ಅವರು, ಕೋರ್ಟ್‌ ಹಾಜರಾಗಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ದಂಡ ವಿಧಿಸಿದೆ.

ಸಾವರ್ಕರ್‌ ಅವರು ಬ್ರಿಟೀಷರಿಗೆ ಸಹಾಯ ಮಾಡಿದ್ದರು. ಅಲ್ಲದೇ ಕ್ಷಮಾಧಾನ ಕೋರಿ ಪತ್ರವನ್ನೂ ಬರೆದಿದ್ದರು ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು.

 

Tags:
error: Content is protected !!