Mysore
24
haze

Social Media

ಭಾನುವಾರ, 29 ಮಾರ್ಚ್ 2026
Light
Dark

ಕೇಂದ್ರ ಬಜೆಟ್‌ 2026: ದೇಶಾದ್ಯಂತ ಐದು ಮೆಡಿಕಲ್‌ ಹಬ್‌ಗಳ ನಿರ್ಮಾಣ 

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದು 2026-27ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆ ಮಾಡಿದರು. ಇದು ಅವರ 9ನೇ ಬಜೆಟ್‌ ಆಗಿದೆ.

ಕೇಂದ್ರ ಬಜೆಟ್‌ನಲ್ಲಿ ಮೆಡಿಕಲ್‌ ಟೂರಿಸಂ ಯೋಜನೆ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ದೇಶಾದ್ಯಂತ ಐದು ಮೆಡಿಕಲ್‌ ಹಬ್‌ಗಳ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಖಾಸಗಿ ವಲಯದ ಜೊತೆ ಸೇರಿ ಮೆಡಿಕಲ್‌ ಹಬ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಆಯುರ್ವೇದ ಚಿಕಿತ್ಸೆ ಉತ್ತೇಜನಕ್ಕೆ ದೇಶದಲ್ಲಿ ಮೂರು ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಆಯುರ್ವೇದ ಔಷಧಿಗಳ ರಫ್ತಿಗೆ ವಿಶೇಷ ಕ್ರಮ ಕೈಗೊಳ್ಳಲಾಗಿದ್ದು, ಆಯುಷ್‌ ಫಾರ್ಮಸಿ ಉನ್ನತೀಕರಣಕ್ಕೆ ಉತ್ತೇಜನ ನೀಡಲಾಗುವುದು.

ಇನ್ನು ಗುಜರಾತ್‌ನ ಜಾಮ್‌ ನಗರದಲ್ಲಿ WHO ಕೇಂದ್ರ ನಿರ್ಮಾಣ ಮಾಡುವ ಜೊತೆಗೆ ಈಶಾನ್ಯ ಭಾರತದಲ್ಲಿ ಏಮ್ಸ್‌ ಆಸ್ಪತ್ರೆ ನಿರ್ಮಾಣ ಮಾಡಲು ಘೋಷಣೆ ಮಾಡಲಾಯಿತು.

 

Tags:
error: Content is protected !!