Mysore
20
overcast clouds

Social Media

ಭಾನುವಾರ, 19 ಜನವರಿ 2025
Light
Dark

’ಅನುಕಂಪದ ಉದ್ಯೋಗ’ ಹಕ್ಕಲ್ಲ: ಸುಪ್ರೀಂ

ಹೊಸದಿಲ್ಲಿ: ಉದ್ಯೋಗಿ ಮರಣ ಹೊಂದಿದ ನಂತ್ರ ಅವರ ಕುಟುಂಬದ ಓರ್ವ ಸದಸ್ಯನಿಗೆ ಅನುಕಂಪದ ಆಧಾರದಲ್ಲಿ ನೀಡುವ ಉದ್ಯೋಗ ಸ್ಥಾಪಿತವಾದ ಹಕ್ಕಲ್ಲ. ಈ ರೀತಿಯ ಉದ್ಯೋಗ ಪಡೆದವರಿಂದ ಕರ್ತವ್ಯ ಲೋಪಗಳಾದರೇ, ಅವರಿಗೆ ನೀಡಲಾದ ಹುದ್ದೆಯ ಅರ್ಹತೆಯನ್ನು ಹೊಂದುವಲ್ಲಿ ವಿಫಲವಾದರೇ, ಅಂತಹವರನ್ನು ಕೆಲಸದಿಂದ ತೆಗೆಯಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ಅಭಿಪ್ರಾಯ ಪಟ್ಟಿದೆ.

ಈ ಸಂಬಂಧ ಪ್ರಕರಣವೊಂದರ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೊಪಣ್ಣ ಅವರನ್ನು ಒಳಗೊಂಡಂತ ನ್ಯಾಯಪೀಠವು, ಅನುಕಂಪದ ಆಧಾರದ ಉದ್ಯೋಗವು ಸಾಮಾನ್ಯ ನೇಮಕಾತಿಯಲ್ಲಿ ಇರುವ ವಿನಾಯ್ತಿಯಷ್ಟೇ. ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ಭದ್ರತೆ ಕಲ್ಪಿಸಲು ಇರುವ ಮಾನವೀಯ ನೆರವಾಗಿದೆ. ಈ ರೀತಿಯ ಸಹಾನುಭೂತಿಯ ಉದ್ಯೋಗ ಪಡೆದವರು, ಹುದ್ದೆ ಆಪೇಕ್ಷಿಸುವಂತಹ ಅರ್ಹತೆಗಳನ್ನು ಹೊಂದಿರಬೇಕು. ಕರ್ತವ್ಯಪರರಾಗಬೇಕು ಎಂದು ಹೇಳಿದೆ.

ಏನಿದು ಪ್ರಕರಣ?
ಅಂದಹಾಗೇ ಮೊಹಮ್ಮದ್ ರೆಹಮಾನ್ ಖಾನ್ ಅವರ ತಂದೆಯ ನಿಧನದ ನಂತರ, ಉತ್ತರ ಪ್ರದೇಶದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಬೆರಳಚ್ಚುಗಾರರ ಉದ್ಯೋಗವನ್ನು ೨೦೧೫ರಲ್ಲಿ ನೀಡಲಾಗಿತ್ತು. ಈ ಹುದ್ದೆಗೆ ಆಪೇಕ್ಷಿತವಾಗಿದ್ದ ಪ್ರತಿ ನಿಮಿಷಕ್ಕೆ ೨೫ ಪದಗಳ ಟೈಪಿಂಗ್ ವೇಗವನ್ನು ಸಾಧಿಸುವಂತೆ ಅವರಿಗೆ ಇಲಾಖೆ ಕಾಲಾವಕಾಶ ನೀಡಿತ್ತು.

ಆದರೆ, ಮೊಹಮ್ಮದ್ ರೆಹಮಾನ್ ಖಾನ್, ನಿಗದಿತ ಸಮಯದಲ್ಲಿ ಈ ಸಾಮರ್ಥ್ಯ ಹೊಂದಲು ವಿಫಲವಾಗಿದ್ದರು. ಹೀಗಿದ್ದರೂ ಹೆಚ್ಚುವರಿ ಕಾಲಾವಕಾಶ ನೀಡಿದ್ರು, ಅವರು ಕೌಶಲ ಸಿದ್ಧಿಸಲಿಲ್ಲ. ಹೀಗಾಗಿ ಪೂರ್ವ ಷರತ್ತಿನ ಅನ್ವಯದ ಕಾರಣ, ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಅಲ್ಲಿ ನಾಲ್ಕನೇ ದರ್ಜೆಯ ಉದ್ಯೋಗ ನೀಡುವಂತೆ ಆದೇಶಿಸಲಾಗಿತ್ತು. ಇದರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತ ಪಡಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ