Mysore
25
overcast clouds

Social Media

ಶನಿವಾರ, 04 ಏಪ್ರಿಲ 2026
Light
Dark

ಅಯೋಧ್ಯೆ: ಎಕೆ 47 ಸ್ವಚ್ಛಗೊಳಿಸುವಾಗ ಕಮಾಂಡರ್‌ಗೆ ಸಿಡಿದ ಗುಂಡು

ಅಯೋಧ್ಯೆ: ರಾಮಮಂದಿರದಲ್ಲಿ ಭದ್ರತೆಗೆಂದು ನಿಯೋಜಿಸಲಾಗಿದ್ದ ಕಮಾಂಡರ್‌ ಒಬ್ಬರು ಗನ್‌ ಅನ್ನು ಸ್ವಚ್ಛಗೊಳಿಸುವಾಗ ಗುಂಡು ಹಾರಿಸಿಕೊಂಡಿರುವ ಘಟನೆ ನಿನ್ನೆ ( ಮಾರ್ಚ್‌ 26 ) ಸಂಜೆ 5.45ಕ್ಕೆ ನಡೆದಿದೆ.

ಮೂಲತಃ ಅಮೇಥಿಯ ರಾಮ್‌ಪ್ರಸಾದ್‌ (53) ಗನ್‌ ಸ್ವಚ್ಛಗೊಳಿಸುತ್ತಿರಬೇಕಾದರೆ ತಿಳಿಯದೇ ತಮಗೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಶ್ರೀರಾಮ್‌ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಲಕ್ನೋದ ವೈದ್ಯಕೀಯ ಕಾಲೇಜಿಗೆ ಕಳುಹಿಸಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಶ್ರೀರಾಮಮಂದಿರ ಭದ್ರತೆಯಲ್ಲಿ ಪಿಎಸಿಯ 32ನೇ ಬೆಟಾಲಿಯನ್‌ನ ಪ್ಲಟೂನ್‌ ಕಮಾಂಡರ್‌ ಆಗಿ ರಾಮ್‌ಪ್ರಸಾದ್‌ ನಿಯೋಜಿಸಲ್ಪಟ್ಟಿದ್ದರು. ಇನ್ನು ಗನ್‌ನಿಂದ ಸಿಡಿದ ಗುಂಡು ನೇರವಾಗಿ ರಾಮ್‌ಪ್ರಸಾದ್‌ ಎಡ ಎದೆಗೆ ಬಡಿದು ಹಾದುಹೋಗಿದೆ. ಹೀಗೆ ಗಂಭೀರವಾಗಿ ಗಾಯಗೊಂಡ ರಾಮ್‌ಪ್ರಸಾದ್‌ ಸ್ಥಳದಲ್ಲೇ ಕುಸಿದುಬಿದ್ದಿದ್ದರು. ಇನ್ನು ಮಂದಿರದ ಹೈಸೆಕ್ಯೂರಿಟಿ ವಲಯದಲ್ಲಿ ಏಕಾಏಕಿ ಗುಂಡಿನ ಶಬ್ದ ಕೇಳಿಬಂದದ್ದರಿಂದ ಕೆಲಕಾಲ ಕೋಲಾಹಲ ಉಂಟಾಯಿತು.

Tags:
error: Content is protected !!