ನವದೆಹಲಿ: ದೆಹಲಿಯಲ್ಲಿ ವಿಚಿತ್ರ ಹವಾಮಾನ ಕಂಡು ಬರುತ್ತಿದ್ದು, ಒಂದೇ ವಾರದ ಅವಧಿಯಲ್ಲಿ ತಾಪಮಾನದಲ್ಲಿ ಭಾರೀ ವ್ಯತ್ಯಾಸವಾಗುತ್ತಿದೆ.
ಪಾಲಂನಂತಹ ಕೆಲವು ನಿಲ್ದಾಣಗಳಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ವರದಿಯಾಗಿದ್ದು, ಜನತೆ ಕಂಗಾಲಾಗಿದ್ದಾರೆ.
ತಾಪಮಾನ ಕುಸಿತಕ್ಕೆ ಪಶ್ಚಿಮದಿಂದ ಬೀಸುತ್ತಿರುವ ಬಲವಾದ ಶೀತ ಮಾರುತಗಳು ಕಾರಣ ಎಂದು ಹೇಳಲಾಗುತ್ತಿದ್ದು, ಸುಮಾರು 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.
ಈ ಗಾಳಿ ನಾಳೆ ಸಂಜೆವರೆಗೂ ಬೀಸಲಿದ್ದು, ಅಲ್ಲಿಯನತಕ ಭಾರೀ ಚಳಿ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಇನ್ನು ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮಾರ್ಚ್.10ರ ವೇಳೆಗೆ ಗರಿಷ್ಠ ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ.





