ನವದೆಹಲಿ: ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ್ದಾರೆ ಎಂದು ಬಿಹಾರದ ಮಾಜಿ ಸಿಎಂ ಚಿತನ್ ರಾಂ ಮಾಂಝಿ ಹೇಳಿದ್ದಾರೆ.
ಇದರಿಂದ ಜಾರ್ಖಾಂಡ್ ಮುಕ್ತಿ ಮೋರ್ಚಾ ಪಕ್ಷ ಮತ್ತು ಜಾರ್ಕಾಂಡ್ ಸಿಎಂ ಹೇಮಂತ್ ಸೊರೆನ್ ಅವರಿಗೆ ಅವರಿಗೆ ಬಹುದೊಡ್ಡ ಹಿನ್ನಡೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಜಿತನ್ ರಾಂ ಮಾಂಝಿ ಅವರ ಹಿಂದೂಸ್ಥಾನಿ ಅವಾಮ್ ಮಾಂಝಿ ಕೂಡ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಾಂಝಿ, ಬಿಹಾರದಿಂದ ಬೇರ್ಪಟ್ಟು ಜಾರ್ಖಂಡ್ ರಾಜ್ಯ ರಚಿಸುವಲ್ಲಿ ಚಂಪೈ ಸೂರೆನ್ ಪಾತ್ರ ಮುಖ್ಯ ಹೀಗಾಗಿ ಅವರನ್ನು ಟೈಗರ್ ಎನ್ನಲಾಗುತ್ತದೆ. ಅವರು ಹುಲಿಯಾಗಿದ್ದರು ಮತ್ತು ಹುಲಿಯಾಗಿಯೇ ಉಳಿಯುತ್ತಾರೆ ಎಂದಿದ್ದಾರೆ.
ಚಂಪೈ ಸೂರೆನ್ ಟ್ವೀಟ್
ನಾವು ರಕ್ತ ಮತ್ತು ಬೆವರು ಸುರಿಸಿ ಕಟ್ಟಿದ ಪಕ್ಷದಲ್ಲಿ ನನ್ನ ಅವಮಾನವಾಗಿದೆ. ಜಾರ್ಖಾಂಡ್‌ನ ಮುಖ್ಯಮಂತ್ರಿಯಾಗಿ ಕೂಡ ನಾನು ಸಾಕಷ್ಟು ಅವಮಾನ ಎದುರಿಸಿದೆ ಎಂದು ಹೇಳಿದ್ದಾರೆ. ದೆಹಲಿಗೆ ತಲುಪಿದ ಬೆನ್ನಲ್ಲೇ ಅವರ ಹೇಳಿಕೆ ಹೀಗೆ ಹೊರಬಿದ್ದಿದೆ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳನ್ನು ಪಕ್ಷದ ಹೈಕಮಾಂಡ್ ರದ್ದುಗೊಳಿಸಿದೆ ಎಂದು ದೂರಿದ ಸೂರೆನ್, ಸಿಎಂ ಅವರೊಬ್ಬರು ಜಾರಿಗೊಳಿಸಿದ ಯೋಜನೆಗಳನ್ನು ಮತ್ತೊಬ್ಬರು ರದ್ದುಗೊಳಿಸುವುದಕ್ಕಿಂತ ಹೆಚ್ಚು ಅವಮಾನ ಪ್ರಜಾಪ್ರಭುತ್ವದಲ್ಲಿ ಬೇರೇನಿದೆ ಎಂದು ಪ್ರಶ್ನಿಸಿದ್ದಾರೆ.