ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಸೂಪರ್ ಪ್ಲಾನ್ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಭಯೋತ್ಪಾದಕ ದಾಳಿಗಳು ಹೆಚ್ಚಾಗುತ್ತಲೇ ಇವೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಪದೇ ಪದೇ ನಡೆಯುತ್ತಿವೆ ಎಂಬ ಆತಂಕಕ್ಕಾರಿ ಮಾಹಿತಿ ಹೊರಬಂದಿತ್ತು. ಹಾಗಾಗಿಯೇ ಈ ತಿಂಗಳ ಆರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಯೋತ್ಪಾದಕ ದಾಳಿ ಕುರಿತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು.
ಹೇಗಾದರೂ ಮಾಡಿ ಇದಕ್ಕೆ ಒಂದು ಅಂತ್ಯ ಹಾಡಲೇಬೇಕು ಎಂದು ಅರಿತ ಕೇಂದ್ರ ಸರ್ಕಾರ ಈಗ ಹೊಸ ಪ್ಲಾನ್ ರೂಪಿಸಿದೆ. ಕಾಶ್ಮೀರ ಕಣಿವೆಯನ್ನು ಭದ್ರ ಪಡಿಸಿರುವ ಕೇಂದ್ರ ಸರ್ಕಾರ ಇದೀಗ ಜಮ್ಮುವನ್ನು ಗುರಿಯಾಗಿಸುತ್ತಿರುವ ಉಗ್ರರನ್ನು ಮಟ್ಟಹಾಕಲು ಮುಂದಾಗಿದೆ.
ಅದಕ್ಕಾಗಿಯೇ ಜಮ್ಮು ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವ ಅಗತ್ಯತೆಗಳನ್ನು ಗುರುತಿಸಿದೆ. ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಭಯೋತ್ಪಾದಕರು ಕಂಡುಕೊಂಡಿರುವ ಒಳನುಸುಳುವಿಕೆ ಮಾರ್ಗಗಳನ್ನು ಗುರುತಿಸಿ ಅನಾಹುತಕ್ಕೆ ತಡೆಹಾಕುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಭಾರತೀಯ ಸೈನಿಕರ ಜೊತೆಗಿದ್ದು, ಭಯೋತ್ಪಾದಕರನ್ನು ಮಟ್ಟ ಹಾಕಲು ಬಿಗ್ ಪ್ಲಾನ್ ಮಾಡಿದೆ.