Mysore
21
overcast clouds
Light
Dark

ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಪದ್ಧತಿ ಸರಳೀಕರಣಕ್ಕೆ ಒತ್ತು

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಇಂದಿನ ಬಜೆಟ್‌ನಲ್ಲಿ ತೆರಿಗೆ ಪದ್ಧತಿ ಸರಳೀಕರಣಕ್ಕೆ ಒತ್ತು ನೀಡಲಾಗಿದೆ.

ಇಂದು ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಪದ್ಧತಿ ಸರಳೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಆಮದಾಗುವ ಬಟ್ಟೆಗಳ ಮೇಲಿನ ಶುಲ್ಕ ಏರಿಕೆ ಮಾಡಲಾಗಿದೆ.

ಆಮದು ಪ್ಲಾಸ್ಟಿಕ್‌ ಮೇಲಿನ ತೆರಿಗೆ ಶೇಕಡಾ.25ರಷ್ಟು ಏರಿಕೆಯಾಗಲಿದ್ದು, ಮೂರು ಕ್ಯಾನ್ಸರ್‌ ಔಷಧಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಆನ್‌ಲೈನ್‌ ವ್ಯವಹಾರಗಳ ಮೇಲಿನ ತೆರಿಗೆ ಕಡಿತವಾಗಲಿದ್ದು, ತೆರಿಗೆ ಪದ್ಧತಿ ಸರಳೀಕರಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.

ಆದಾಯ ತೆರಿಗೆ ನೀತಿಯಲ್ಲಿ ಭಾರೀ ಬದಲಾವಣೆಯಾಗಲಿದ್ದು, ಆದಾಯ ತೆರಿಗೆ ಸಲ್ಲಿಕೆ ವಿಳಂಬವಾದರೆ ಕ್ರಿಮಿನಲ್‌ ಕೇಸ್‌ ದಾಖಲು ಇಲ್ಲ ಎಂದು ಘೋಷಣೆಯಾಗಿದೆ.

ಇನ್ನೂ ಹೂಡಿಕೆದಾರರಿಗೆ ಪ್ರಧಾನಿ ನರೇಂದ್ರ ಮೋದಿ ಬಿಗ್‌ ರಿಲೀಫ್‌ ಕೊಟ್ಟಿದ್ದು, ಹೂಡಿಕೆದಾರರಿಗೆ ವಿಧಿಸುತ್ತಿದ್ದ ಏಂಜೆಲ್‌ ಟ್ಯಾಕ್ಸ್‌ ರದ್ದು ಮಾಡಲಾಗಿದೆ. ಸಂಬಳದಾರರಿಗೆ ಬಿಗ್‌ ರಿಲೀಫ್‌ ನೀಡಲಾಗಿದ್ದು, ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಭಾರ ಸ್ವಲ್ಪ ಕಡಿಮೆಯಾಗಿದೆ.

ಇನ್ನೂ ಜನರು 0.3 ಲಕ್ಷ ರೂವರೆಗೆ ಯಾವುದೇ ತೆರಿಗೆ ಪಾವತಿಸುವಂತಿಲ್ಲ. ಆದರೆ 3ರಿಂದ 7 ಲಕ್ಷದವರೆಗೆ ಶೇಕಡಾ.5 ರಷ್ಟು ತೆರಿಗೆ ಪಾವತಿಸಬೇಕು. 7 ರಿಂದ 10 ಲಕ್ಷದವರಿಗೆ ಶೇಕಡಾ.10 ರಷ್ಟು ತೆರಿಗೆ ವಿಧಿಸಲಾಗಿದ್ದು, 15 ಲಕ್ಷ ದಾಟಿದರೆ ಶೇಕಡಾ.30 ರಷ್ಟು ತೆರಿಗೆ ಪಾವತಿಸಬೇಕಾಗಿದೆ.