Mysore
34
few clouds

Social Media

ಭಾನುವಾರ, 10 ಮೇ 2026
Light
Dark

ಕೇಂದ್ರ ಬಜೆಟ್‌ 2026: 12 ಕ್ಯಾನ್ಸರ್‌ ಔಷಧಗಳಿಗೆ ತೆರಿಗೆ ವಿನಾಯಿತಿ

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದು 2026-27ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆ ಮಾಡಿದರು. ತೆರಿಗೆಗೆ ಸಂಬಂಧಿಸಿದಂತೆ ಹಲವು ಕ್ರಮ ಕೈಗೊಳ್ಳಲಾಗಿದ್ದು, ಅವುಗಳು ಈ ಕೆಳಕಂಡಂತಿವೆ.

ಹೊಸದಾಗಿ ಹೂಡಿಕೆ ಮಾಡುವ ವಿದೇಶಿ ಕಂಪನಿಗಳಿಗೆ ಟ್ಯಾಕ್ಸ್‌ ಹಾಲಿಡೇ ಸಿಕ್ಕಿದ್ದು, ಡೇಟಾ ಸರ್ವೀಸ್‌ ಸೆಂಟರ್‌ ಕಂಪನಿಗಳಿಗೆ ಟ್ಯಾಕ್ಸ್‌ ವಿನಾಯಿತಿ ನೀಡಲಾಗಿದೆ.

ಮಾರ್ಚ್.‌31ರವರೆಗೆ ಆದಾಯ ತೆರಿಗೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ತೆರಿಗೆ ಪಾವತಿ ವಿಳಂಬಕ್ಕೆ ಶೇಕಡಾ.100ರಷ್ಟು ದಂಡ ವಿಧಿಸುವ ಪ್ರಸ್ತಾಪ ಮಾಡಲಾಗಿದೆ.

ಹೊಸ ಆದಾಯ ತೆರಿಗೆ ಕಾನೂನು ಜಾರಿಯಾಗಲಿದ್ದು, ಅಪಘಾತ ವಿಮೆ ಹಣಕ್ಕೆ ಯಾವುದೇ ತೆರಿಗೆ ಇಲ್ಲ. ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ಘೋಷಣೆ ಮಾಡಲಾಗಿದೆ.

ಇನ್ನು ಈ ವರ್ಷ ತೆರಿಗೆಯಿಂದ 28 ಲಕ್ಷ ಕೋಟಿ ಆದಾಯ ಬಂದಿದ್ದು, ತೆರಿಗೆ ವಂಚನೆಗೆ ಇನ್ನು ಮುಂದೆ ಶಿಕ್ಷೆಯಿಲ್ಲ ಬರೀ ದಂಡ ಅಂದರೆ ಶೇಕಡಾ 10ರಷ್ಟು ದಂಡ ವಿಧಿಸುವ ಪ್ರಸ್ತಾಪ ಮಾಡಲಾಗಿದೆ.

ವಿಮಾನಗಳ ಬಿಡಿಭಾಗಗಳ ಆಮದು ಸುಂಕ ಇಳಿಕೆ ಮಾಡಲಾಗಿದ್ದು, ಚರ್ಮೋತ್ಪನ್ನಗಳ ಮೇಲಿನ ಆಮದು ಸುಂಕವನ್ನೂ ಇಳಿಕೆ ಮಾಡಲಾಗಿದೆ. ಅಣುವಿದ್ಯುತ್‌ ಸ್ಥಾವರ ಪರಿಕರಗಳ ಆಮದು ಸುಂಕವನ್ನು ಇಳಿಕೆ ಮಾಡಲಾಗಿದೆ.

12 ಕ್ಯಾನ್ಸರ್‌ ಔಷಧಗಳಿಗೆ ತೆರಿಗೆ ವಿನಾಯಿತಿ ಮಾಡಲಾಗಿದ್ದು, ಏಳು ಅಪರೂಪದ ಕಾಯಿಲೆಗಳ ಔಷದಗಳ ಬೆಲೆ ಇಳಿಕೆ ಮಾಡಲಾಗಿದೆ.

ಇನ್ನು ಮದ್ಯಪ್ರಿಯರಿಗೆ ಬಿಗ್‌ ಶಾಕ್‌ ಎದುರಾಗಿದ್ದು, ಮದ್ಯದ ಬೆಲೆಯಲ್ಲಿ ಏರಿಕೆ ಮಾಡಲಾಗಿದ್ದು, ಸಿಗರೇಟ್‌ ಮೇಲಿನ ಸುಂಕ ಏರಿಕೆ ಮಾಡಲಾಗಿದೆ.

ಇನ್ನು ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವರ್ಷದ ಆದಾಯ ತೆರಿಗೆ ಈ ಬಾರಿಯೂ ಮುಂದುವರಿಕೆ ಆಗಲಿದೆ.

 

 

 

Tags:
error: Content is protected !!