ಮುಂಬೈ: ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಮಮಂದಿರಕ್ಕೆ ಬುಲ್ಡೋಜರ್ ಬಿಡುತ್ತಾರೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಇಂಡಿಯಾ ಕೂಟದ ನಾಯಕರು ಶನಿವಾರ(ಮೇ.18) ತೀವ್ರವಾಗಿ ಖಂಡಿಸಿದ್ದಾರೆ.
ಮುಂಬೈನಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಜಂಟಿ ಪತ್ರಿಕಗೋಷ್ಠಿ ನಡೆಸಿ ಮೋದಿ ಹೇಳಿಕೆಯನ್ನು ಖಾರವಾಗಿ ಪ್ರಶ್ನಿಸಿದರು.
ನಾವು ಎಂದೂ ಯಾರ ಮೇಲೆಯೂ ಬುಲ್ಡೋಜರ್ ಪ್ರಯೋಗಿಸಿಲ್ಲ. ಬುಲ್ಡೋಜರ್ ಸಂಸ್ಕೃತಿ ಇರುವುದು ಅವರ ಸರ್ಕಾರದಲ್ಲೇ. ಮೋದಿಗೆ ಸುಳ್ಳು ಹೇಳುವ ಚಾಳಿ ಇದೆ. ಕಾಂಗ್ರೆಸ್ ಎಂದೂ ಮಾಡದ ಕೆಲಸಗಳ ಬಗ್ಗೆ ಮಾತನಾಡಿ ಜನರನ್ನು ಪ್ರಜೋದಿಸುತ್ತಾರೆ ಎವರೊಬ್ಬ ಸುಳ್ಳುಗಾರ ಎಂದು ಖರ್ಗೆ ವಾಗ್ದಾಳಿ ಮಾಡಿದರು.
ಮೋದಿ ಜನರನ್ನು ಪ್ರಜೋದಿಸಲು ಅಂತಹ ಹೇಳಿಕೆ ನೀಡಿದ್ದಾರೆ. ಚುನಾವಣೆ ಆಯೋಗವು ಮೋದಿ ವಿರುದ್ಧ ಕ್ರಮ ಜರುಗಿಸಬೇಕು. ನಾವು ಎಲ್ಲರನ್ನು ರಕ್ಷಿಸುತ್ತೇವೆ. ಸಂವಿಧಾನದ ಪ್ರಕಾರ ಕೆಲಸ ನಿರ್ವಹಿಸುತ್ತಿದ್ದೇವೆ ಎಂದರು.
ಮೋದಿ ಹಾಗೂ ಬಿಜೆಪಿ ಎಲ್ಲೇ ಹೋದರು ವಿಭಜನೆ ಮಾಡುವ ಬಗ್ಗೆಯೇ ಚಿಂತಿಸಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂಡಿಯಾ ಕೂಟವು ಅಯೋಧ್ಯ ರಾಮಮಂದಿರದ ನಿರ್ಮಾಣವನ್ನು ಪೂರ್ಣಗೊಳಿಸುತ್ತದೆ. ಜೊತೆಗೆ ಎಲ್ಲ ಧರ್ಮಗಳ ಪ್ರರ್ಥನಾ ಮಂದಿರಗಳನ್ನೂ ರಕ್ಷಿಸುವುದು ಸರ್ಕಾರದ ಜವಾಬ್ದಾರಿಗಳು ಎಂದು ಇಂಡಿಯಾ ಒಕ್ಕೂಟದ ನಾಯಕರು ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಇನ್ನಿತರರು ಇದ್ದರು.