Mysore
23
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಭೂಷಣ್‌ ಸ್ಟೀಲ್‌ ಬ್ಯಾಂಕ್‌ ವಂಚನೆ ಪ್ರಕರಣ: ಇಡಿಯಿಂದ JSWಕಂಪೆನಿಗೆ 4,025 ಕೋಟಿ ರೂ. ಹಸ್ತಾಂತರ

ನವದೆಹಲಿ: ಸುಪ್ರೀಂಕೋರ್ಟ್‌ನ ಆದೇಶದಂತೆ ಭೂಷಣ್‌ ಸ್ಟೀಲ್‌ ಹಾಗೂ ಪವರ್‌ ಕಂಪೆನಿಗೆ ಸೇರಿದ ಸುಮಾರು 4,025 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಜೆಎಸ್‌ಡಬ್ಲ್ಯೂ ಸ್ಟೀಲ್‌ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖಾ ಸಂಸ್ಥೆಯೂ ಹಸ್ತಾಂತರಿಸಿದೆ.

ಇಡಿ ತನಿಖಾ ಸಂಸ್ಥೆಯೂ ಮುಟ್ಟುಗೋಲು ಹಾಕಿಕೊಂಡಿದ್ದ ಭೂಷಣ್‌ ಸ್ಟೀಲ್‌ಗೆ ಸಂಬಂಧಿಸಿದ ಆಸ್ತಿಯನ್ನು ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ (ಇಡಿ) ಸಂಸ್ಥೆಯೂ ಜೆಎಸ್‌ಡಬ್ಲ್ಯೂ ಕಂಪನಿಗೆ ಇಂದು(ಡಿ.13) ಹಸ್ತಾಂತರಿಸಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಭೂಷಣ್‌ ಸ್ಟೀಲ್‌ ಕಂಪೆನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಬಳಿಕ ಅದರಲ್ಲಿ ಬ್ಯಾಂಕ್‌ ಸಾಲ ವಂಚನೆ, ಹಣವನ್ನು ಬೇರೆಡೆ ವರ್ಗಾಯಿಸಿದ ಆರೋಪವನ್ನು ಭೂಷಣ್‌ ಕಂಪೆನಿ ಎದುರಿಸುತ್ತಿತ್ತು. ಹೀಗಾಗಿ ದಿವಾಳಿಯಾದ ಕಾರಣ ಆ ಕಂಪೆನಿಯ ಆಸ್ತಿಯನ್ನು ಖರೀದಿಸಲು ಜೆಎಸ್‌ಡಬ್ಲ್ಯೂ ಆಸಕ್ತಿ ಹೊಂದಿತ್ತು. ಕಾರ್ಪೋರೇಟ್‌ ದಿವಾಳಿತನ ಪರಿಹಾರ ಪ್ರಕ್ರಿಯೆಯ ನಿಯಮದಡಿ ಭೂಷಣ್‌ ಸ್ಟೀಲ್‌ನ ಆಸ್ತಿ ಖರೀದಿಗೆ ಜೆಎಸ್‌ಡಬ್ಲ್ಯೂ ಕಂಪೆನಿ ಸುಪ್ರೀಂಕೋರ್ಟ್‌ಗೆ ಅರ್ಜಿಸಲ್ಲಿಸಿತ್ತು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಇಡಿ ತನಿಖಾ ಸಂಸ್ಥೆಗೆ ಭೂಷಣ್‌ ಸ್ಟೀಲ್‌ ಕಂಪೆನಿಯ ಸುಮಾರು 4,025 ಕೋಟಿ ರೂ. ಆಸ್ತಿಯನ್ನು ಜೆಎಸ್‌ಡಬ್ಲ್ಯೂ ಕಂಪೆನಿಗೆ ಹಸ್ತಾಂತರರಿಸುವಂತೆ ಆದೇಶ ನೀಡಿತ್ತು. ಸುಪ್ರೀಂನ ಈ ಆದೇಶದ ಮೇರೆಗೆ ಇಡಿ ತನಿಖಾ ಸಂಸ್ಥೆಯೂ ಆಸ್ತಿಯನ್ನು ಜೆಎಸ್‌ಡಬ್ಲ್ಯೂ ಕಂಪೆನಿಗೆ ವರ್ಗಾಯಿಸಿದೆ.

 

Tags: