Mysore
26
light rain

Social Media

ಶನಿವಾರ, 01 ಆಗಸ್ಟ್ 2026
Light
Dark

ಬಾಂಗ್ಲಾ: 14 ಹಿಂದೂ ದೇವಾಲಯಗಳ ಮೇಲೆ ದಾಳಿ

ಢಾಕಾ: ಸರಣಿ ದಾಳಿಯಲ್ಲಿ ಸುಮಾರು 14 ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿರುವ ಘಟನೆ ಬಾಂಗ್ಲಾದೇಶದ ವಾಯುವ್ಯ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ದೇವಾಲಯದಲ್ಲಿರುವ ವಿಗ್ರಹಗಳನ್ನು ರಾತ್ರಿಯ ಸಮಯದಲ್ಲಿ ಧ್ವಂಸಗೊಳಿಸಿದ್ದಾರೆ. ಸುಮಾರು 14 ದೇವಸ್ಥಾನಗಳಲ್ಲಿನ ವಿಗ್ರಹಗಳನ್ನು ಒಡೆದುಹಾಕಿರುವುದಾಗಿ ಬಾಲಿಯಾದಾಂಗಿ ಹಿಂದೂ ಸಮುದಾಯದ ಮುಖಂಡ ಬಿದ್ಯಾನಾಥ್ ಬರ್ಮಾನ್ ತಿಳಿಸಿದ್ದಾರೆ. ರಾತ್ರೋರಾತ್ರಿ ದೇವಾಲಯದೊಳಕ್ಕೆ ನುಗ್ಗಿದ ದುಷ್ಕರ್ಮಿಗಳು ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿ, ಕೆರೆ ಹಾಗೂ ದೇವಸ್ಥಾನದ ಆವರಣದೊಳಗೆಲ್ಲಾ ಎಸೆದಿರುವುದಾಗಿ ಬರ್ಮಾನ್‌ ವಿವರಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!