Mysore
20
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಗಡಿ ವಿಚಾರವಾಗಿ ಮತ್ತೊಮ್ಮೆ ತಗಾದೆ ತೆಗೆದ ಚೀನ : ಅರುಣಾಚಲ ಪ್ರದೇಶದ ೩೦ ಸ್ಥಳಗಳಿಗೆ ಮರು ನಾಮಕರಣ ಮಾಡಿದ ಚೀನ !

ನವದೆಹಲಿ:  ಅರುಣಾಚಲ ಪ್ರದೇಶದ ೩೦ ಕ್ಕೂ ಹೆಚು  ‌ಸ್ಥಳಗಳಿಗೆ  ಹೊಸ ಹೆಸರುಗಳನ್ನಿಟ್ಟಿರುವ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿದೆ.

ಗಡಿ ವಿಚಾರವಾಗಿ ಭಾರತದೊಂದಿಗೆ ಚೀನ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಇದೀಗ ಭಾರತದ ಅರುಣಾಚಲ ಪ್ರದೇಶದ ೩೦ಕ್ಕೂ ಹೆಚ್ಚು ಪ್ರದೇಶಗಳು ಚೀನಕ್ಕೆ ಸೇರಿದೆ ಎಂದು ಹೇಳುವ ಮೂಲಕ ಪಟ್ಟಿ ಒಂದನ್ನು ಬಿಡುಗಡೆ ಮಾಡಿದೆ.

ಈ ಮೂಲಕ ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕನ್ನು ಸಾಧಿಸಲು ಮುಂದಾಗಿರುವ ಚಿನ ಮತ್ತೊಂದು ಹೊಸಾ ತಗಾದೆ ಶುರು ಮಾಡಿದೆ.

ಭಾರತ ವಿರೋಧ : ಅರುಣಾಚಲ ಪ್ರದೇಶದ ೩೦ಕ್ಕೂ ಹೆಚ್ಚು ಸ್ಥಳಗಳಿಗೆ ಹೊಸ ಹೆಸರುಗಳನ್ನಿಡುವುದನ್ನು ಭಾರತದ ವಿರೋಧಿಸಿರುವ, ‘ಅರುಣಾಚಲ ಪ್ರದೇಶ ದೇಶದ ಅವಿಭಾಜ್ಯ ಅಂಗ. ಇಲ್ಲಿನ ಪ್ರದೇಶಗಳಿಗೆ ಹೊಸದಾಗಿ ನಾಮಕರಣ ಮಾಡುವುದರಿಂದ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದೆ.

‘ಝಂಗ್ನಾನ್‌ನ ವಿವಿಧ ಪ್ರದೇಶಗಳಿಗೆ 30 ಚೀನಿ ಹೆಸರಿರುವ ಪಟ್ಟಿಯನ್ನು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದೆ’ ಎಂದು ಗ್ಲೋಬಲ್‌ ಟೈಮ್ಸ್‌ ತಿಳಿಸಿದೆ.

‘ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಸರುಗಳನ್ನು ಘೋಷಿಸಲಾಗಿದ್ದು, ಇವು ಮೇ 1ರಿಂದ ಜಾರಿಗೆ ಬರಲಿವೆ’ ಎಂದೂ ಮಾಹಿತಿ ನೀಡಿದೆ.

ಈ ಹಿಂದೆಯೂ ಪಟ್ಟಿ ಪ್ರಕಟಿಸಿದ್ದ ಚೀನ : ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು 2017ರಲ್ಲಿ ಆರು, 2021ರಲ್ಲಿ 15 ಹಾಗೂ 2023ರಲ್ಲಿ 11 ಸ್ಥಳಗಳಿಗೆ ಹೊಸ ಹೆಸರುಗಳ ಪಟ್ಟಿಯನ್ನು ಪ್ರಕಟಿಸಿತ್ತು.

ಮೋದಿ ವಿರುದ್ಧ ಪ್ರತಿಕಾರ :   ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 13 ಸಾವಿರ ಅಡಿ ಉದ್ದದ ಸೇಲಾ ಸುರಂಗವನ್ನು ಉದ್ಘಾಟಿಸಿದ್ದರು. ಇದಕ್ಕೆ ಪ್ರತೀಕಾರ ಕ್ರಮವಾಗಿ ಚೀನಾ ಹೊಸ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ.

 

Tags: