Mysore
31
scattered clouds

Social Media

ಮಂಗಳವಾರ, 02 ಜೂನ್ 2026
Light
Dark

ನಿನಗೆ ಹುಚ್ಚು ಹಿಡಿದಿದ್ಯಾ?: ನೆತನ್ಯಾಹು ವಿರುದ್ಧ ಡೊನಾಲ್ಡ್‌ ಟ್ರಂಪ್‌ ಕೆಂಡಾಮಂಡಲ

ವಾಷಿಂಗ್ಟನ್:‌ ದೂರವಾಣಿ ಸಂಭಾಷಣೆ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಲೆಬನಾನ್‌ನ ಬೈರೂತ್‌ ಮೇಲೆ ಇಸ್ರೇಲ್‌ ನಡೆಸುತ್ತಿರುವ ಸರಣಿ ಬಾಂಬ್‌ ದಾಳಿಗಳ ಬಗ್ಗೆ ಟ್ರಂಪ್‌ ತೀವ್ರವಾಗಿ ಕಿಡಿಕಾರಿದ್ದಾರೆ. ನಿನಗೆ ಹುಚ್ಚು ಹಿಡಿದಿದ್ಯಾ? ನೀನು ಏನು ಮಾಡುತ್ತಿದ್ದೀರಾ? ಎಂದು ನೆತನ್ಯಾಹು ವಿರುದ್ಧ ಏಕವಚನದಲ್ಲೇ ಕೂಗಾಡಿದ್ದಾರೆ.

ಸುಮಾರು 40 ರಿಂದ 60 ನಿಮಿಷಗಳ ಸುದೀರ್ಘ ದೂರವಾಣಿ ಕರೆ ಅತ್ಯಂತ ಆಕ್ರೋಶಭರಿತವಾಗಿತ್ತು. ಈ ಕರೆಯಲ್ಲಿ ನೆತನ್ಯಾಹು ಅವರು ಸಹ ಅಮೇರಿಕಾದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:
error: Content is protected !!