ಅನುಮತಿಗಾಗಿ ಕಾಯುತ್ತಿರುವ ಮತ್ತೆರಡು ಹಡಗುಗಳು
ಹೊಸದಿಲ್ಲಿ : ಸುಮಾರು 46,000 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ಇಂಧನ ಹೊತ್ತ ದೊಡ್ಡ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಟ್ಯಾಂಕರ್, ಗ್ರೀನ್ ಸಾನ್ವಿ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದು, ಏಪ್ರಿಲ್ 6 ರ ವೇಳೆಗೆ ಮುಂಬೈ ತಲುಪುವ ನಿರೀಕ್ಷೆಯಿದೆ.
ಟ್ಯಾಂಕರ್ ಸುರಕ್ಷಿತವಾಗಿ ಸಂಚರಿಸುತ್ತಿದೆ ಮತ್ತು ನಿಗದಿತ ಸಮಯದಲ್ಲಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸುವ ಹಾದಿಯಲ್ಲಿದೆ ಎಂದು ಹಡಗು ನಿರ್ದೇಶನಾಲಯ ತಿಳಿಸಿದೆ.
ಕಳೆದ ವಾರ ಕಾಂಡ್ಲಾದಲ್ಲಿ ಜಗವಸಂತ್ ಮತ್ತು ನ್ಯೂ ಮಂಗಳೂರಿನಲ್ಲಿ ಪೈನ್ ಗ್ಯಾಸ್ ಸೇರಿದಂತೆ ಇತರ ಟ್ಯಾಂಕರ್‌ಗಳು ಯಶಸ್ವಿಯಾಗಿ ಸರಬರಾಜು ಮಾಡಿದ ನಂತರ ಎಲ್‌ಪಿಜಿ ಟ್ಯಾಂಕರ್, ಗ್ರೀನ್ ಸಾನ್ವಿ, ಹಾರ್ಮುಜ್ ಜಲಸಂಧಿಯ ಮೂಲಕ ಆಗಮಿಸುತ್ತಿದೆ. ಇದು ಗಲ್ಛ್ ಪ್ರದೇಶದಲ್ಲಿನ ಉದ್ವಿಗ್ನತೆಯ ಹೊರತಾಗಿಯೂ ಭಾರತದ ಎಲ್‌ಪಿಜಿ ಪೂರೈಕೆ ಮುಂದುವರಿದಿದೆ ಎಂಬುದನ್ನು ತೋರಿಸುತ್ತದೆ.
ಗ್ರೀನ್ ಆಶಾ ಮತ್ತು ಜಗ್ ವಿಕ್ರಮ್ ಎಂಬ ಎರಡು ಎಲ್‌ಪಿಜಿ ವಾಹಕಗಳು ಪ್ರಸ್ತುತ ಜಲಸಂಧಿಯ ಮೂಲಕ ಹಾದುಹೋಗಲು ಭಾರತೀಯ ನೌಕಾಪಡೆಯ ಅನುಮತಿಗಾಗಿ ಕಾಯುತ್ತಿವೆ. ಈ ಪ್ರದೇಶದಲ್ಲಿ ಸಿಲುಕಿರುವ ಎಲ್ಲ ಭಾರತೀಯ ಹಡಗುಗಳು ಸುರಕ್ಷಿತವಾಗಿ ಚಲಿಸುವಂತೆ ನೋಡಿಕೊಳ್ಳಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಏತನಧ್ಯೆ ಟ್ಯಾಂಕರ್ ಬಿಡಬ್ಲು ಟಿವೈಆರ್ ಈಗಾಗಲೇ ಮುಂಬೈ ತಲುಪಿದೆ ಮತ್ತು ಅದರ ಸರಕುಗಳನ್ನು ಇಳಿಸುತ್ತಿದೆ, ಆದರೆ ಬಿಡ್ಲು ಇಎಲ್ ಎಂ ಅನ್ನು ಎನ್ನೋರ್ ಬಂದರಿಗೆ ಮರುಮಾರ್ಗದಲ್ಲಿ ಕಳುಹಿಸಲಾಗಿದ್ದು, ಶನಿವಾರ ಮುಂಜಾನೆ ತಲುಪುವ ನಿರೀಕ್ಷೆಯಿದೆ.
ಭಾರತವು ಪ್ರಸ್ತುತ ಗಲ್ಛ್ ಪ್ರದೇಶದಲ್ಲಿ ಹಲವಾರು ಹಡಗುಗಳನ್ನು ಹೊಂದಿದ್ದು, ಸುಮಾರು 20,500 ಭಾರತೀಯ ನಾವಿಕರು ಕರ್ತವ್ಯದಲ್ಲಿದ್ದಾರೆ. ಇವುಗಳಲ್ಲಿ 500 ಕ್ಕೂ ಹೆಚ್ಚು ಭಾರತೀಯ ಧ್ವಜ ಹೊಂದಿರುವ ಹಡಗುಗಳಿವೆ ಮತ್ತು ಪ್ರಾದೇಶಿಕ ಅಪಾಯಗಳ ನಡುವೆ 1,100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಈಗಾಗಲೇ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.





