ನೀರಾಜ್‌ ಚೋಪ್ರಾಗೆ ಮತ್ತೊಂದು ಚಿನ್ನ

ಫಿನ್ಲೆಂಡ್:‌ ವಿಶ್ವ ಚಾಂಪಿಯನ್‌ ಭಾರತದ ಜಾವೆಲಿನ್‌ ತಾರೆ ನೀರಾಜ್‌ ಚೋಪ್ರಾ, ಪಾವೊ ನೂರ್ಮಿ ಗೇಮ್ಸ್‌ ಪುರುಷರ ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಮಂಗಳವಾರ ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ನಡೆದ ಈ ಗೇಮ್ಸ್‌ನಲ್ಲಿ ಅಂತಿಮವಾಗಿ 85.97 ಮೀಟರ್‌ ದೂರ ಎಸೆದು ಚೋಪ್ರಾ ಅಗ್ರಸ್ಥಾನ ಪಡೆದರು. 2022 ರಲ್ಲಿ ಇಲ್ಲಿಯೇ ಬೆಳ್ಳಿ ಪದಕ ಗೆದ್ದಿದ್ದರು.

ನೀರಾಜ್‌ ಚೋಪ್ರಾ 2020 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು. ಅಂದು 97.58 ಮೀ.ದೂರ ಭರ್ಜಿ ಎಸೆಯುವ ಮೂಲಕ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದರು. ಇದೀಗ ಪ್ಯಾರಿಸ್‌ ಒಲಂಪಿಕ್ಸ್‌ಗೆ ನೇರ ಅರ್ಹತೆ ಪಡೆದಿರುವ ಇವರು ಮತ್ತೊಮ್ಮೆ ವಿಶ್ವ ಕ್ರೀಡಾಕೂಟದಲ್ಲಿ ಭಾರತವನ್ನು ಮುಗಿಲೆತ್ತಕ್ಕೆ ಕೊಂಡೊಯ್ಯುವ ವಿಶ್ವಾಸ ಮೂಡಿಸಿದ್ದಾರೆ.