Mysore
21
overcast clouds
Light
Dark

Loksabha Election Results 2024 : ಕೊಯಮತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈಗೆ ಹಿನ್ನಡೆ

ತಮಿಳುನಾಡು: ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರು ಪೊಲೀಸ್‌ ಹುದ್ದೆ ತೊರೆದು ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದರು. ಇನ್ನು ಈವರೆಗೆ ತಮಿಳುನಾಡಿನಲ್ಲಿ ಅರಳದ ಕಮಲವನ್ನು ಮೊದಲ ಬಾರಿಗೆ ಅರಳಿಸುವ ಪ್ರಯತ್ನಕ್ಕೆ ಮುನ್ನುಗ್ಗಿದ್ದ ಅಣ್ಣಾಮಲೈಗೆ ಮತದಾರ ಕೈ ಕೊಟ್ಟಿದ್ದಾನೆ.

ಇಲ್ಲಿನ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಅಣ್ಣಾಮಲೈಗೆ ಹಿನ್ನಡೆ ಉಂಟಾಗಿದೆ. ಗಣಪತಿ ರಾಜ್‌ ಕುಮಾರ್‌ ವಿರುದ್ಧ 3 ಸಾವಿರ ಅಂತರಗಳ ಹಿನ್ನಡೆ ಅನುಭವಿಸಿದ್ದಾರೆ ಅಣ್ಣಾಮಲೈ.

ಬೆಳಿಗ್ಗೆ 11.25 ರ ವೇಳೆ ಡಿಎಂಕೆ ಪಕ್ಷದ ಗಣಪತಿ ರಾಜ್‌ಕುಮಾರ್‌ 5127 ಮತ ಪಡೆದು ಮುನ್ನಡೆ ಸಾಧಿಸಿದರೇ, 1792 ಮತ ಪಡೆದಿರುವ ಬಿಜೆಪಿಯ ಅಣ್ಣಾಮಲೈ ಹಿನ್ನಡೆ ಅನುಭವಿಸಿದ್ದಾರೆ. ಈ ಇಬ್ಬರ ನಡುವಿನ ಅಂತರ 3335 ಮತಗಳಾಗಿವೆ.