Mysore
27
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಟೆರರಿಸಂ ಕಡಿಮೆಯಾಗಿದೆ: ಅಮಿತ್‌ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ದೇಶದಲ್ಲಿ ಟೆರರಿಸಂ ಕಡಿಮೆಯಾಗಿದ್ದು, ಈ ದೇಶದಲ್ಲಿ ಇದೀಗ ಭಯೋತ್ಪಾದನೆಗೆ ಸ್ಥಳವಿಲ್ಲ ಎಂದು ಕೇಂದ್ರ ಗೃಹ ಅಮಿತ್‌ ಶಾ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಇಂದು(ಮಾರ್ಚ್‌.21) ಈ ಕುರಿತು ಮಾತನಾಡಿದ ಅವರು, ಕಳೆದ 10 ವರ್ಷಗಳ ಹಿಂದಿನ ಸರ್ಕಾರಗಳ ವರ್ತನೆ ಸಡಿಲವಾಗಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ರಾಷ್ಟ್ರದ ಭದ್ರತೆ ಬಲಿಷ್ಟಗೊಂಡಿದೆ. ಅಲ್ಲದೇ ಗೃಹ ಸಚಿವಾಲಯದಲ್ಲಿ ಅಗತ್ಯ ಬದಲಾವಣೆ ಮಾಡಲಾಗಿದ್ದು, ನಾವು ಕಾಶ್ಮೀರಿ ಪಂಡಿತರಿಗೆ ಮೀಸಲಾತಿಯನ್ನ ನೀಡಿದ್ದೇವೆ. ಹೀಗಾಗಿ ನಾವು ಭದ್ರತಾ ಪಡೆಗಳ ವಿಶ್ವಾಸ ಹೆಚ್ಚಿಸಿದ್ದೇವೆ ಎಂದು ಹೇಳಿದರು.

ಇನ್ನು ನಾವು ನಕ್ಸಲರ ಆರ್ಥಿಕ ಬೆನ್ನೆಲುಬು ಮುರಿದ್ದೇವೆ. ನಮ್ಮ ಸೇನೆಯೂ ಒಬ್ಬ ನಕ್ಸಲರನ್ನೂ ಬಿಡುವುದಿಲ್ಲ. ದೇಶದಲ್ಲಿ ನಕ್ಸಲಿಸಂ ಕೊನೆಗೊಳಿಸುವುದೇ ನಮ್ಮ ಉದ್ದೇಶವಾಗಿದೆ. ಹಾಗಾಗಿ 2026ರ ಮಾರ್ಚ್‌.31ರೊಳಗೆ ದೇಶದಲ್ಲಿ ಸಂಪೂರ್ಣವಾಗಿ ನಕ್ಸಲಿಸಂ ಕೊನೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.

Tags:
error: Content is protected !!