Mysore
25
haze

Social Media

ಗುರುವಾರ, 29 ಜನವರಿ 2026
Light
Dark

ರಾಷ್ಟ್ರ ರಾಜಧಾನಿಯಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಿದೆ: ಅಮಿತ್‌ ಶಾ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸುಳ್ಳು, ವಂಚನೆಯ ಆಡಳಿತ ಅಂತ್ಯವಾಗಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಪದೇ ಪದೇ ಸುಳ್ಳು ಭರವಸೆಗಳನ್ನು ನೀಡಿ ಸಾರ್ವಜನಿಕರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ದೆಹಲಿ ಜನತೆ ತೋರಿಸಿಕೊಟ್ಟಿದ್ದಾರೆ. ಕಲುಷಿತಗೊಂಡ ಯಮುನಾ ನದಿ, ಕಲುಷಿತ ಕುಡಿಯುವ ನೀರು, ಒಡೆದ ರಸ್ತೆಗಳು, ತುಂಬಿ ತುಳುಕುತ್ತಿರುವ ಚರಂಡಿಗಳು ಪ್ರತಿ ಬೀದಿಯಲ್ಲಿ ತೆರೆದಿರುವ ಮದ್ಯದಂಗಡಿಗಳಿಗೆ ಸಾರ್ವಜನಿಕರು ತಮ್ಮ ಮತಗಳ ಮೂಲಕ ಉತ್ತರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ದೆಹಲಿಯಲ್ಲಿ ಈ ವಿಜಯಕ್ಕಾಗಿ ಹಗಲಿರುಳು ಶ್ರಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ಹಾಗೂ ಎಲ್ಲಾ ಕಾರ್ಯಕರ್ತರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅಲ್ಲದೇ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೆಹಲಿ ಆದರ್ಶ ರಾಜಧಾನಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಹಿಂದೆ ಇದ್ದ ಸರ್ಕಾರದ ಸುಳ್ಳಿನ ಆಡಳಿತ ಕೊನೆಗೊಂಡಿದೆ. ಇದು ಅವರ ದುರಹಂಕಾರ ಹಾಗೂ ಅರಾಜಕತೆಯ ಸೋಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಮೋದಿ ಕೀ ಗ್ಯಾರಂಟಿಗೆ ಗೆಲುವು ಸಿಕ್ಕಿದೆ. ಈ ಬೃಹತ್‌ ಜನಾದೇಶಕ್ಕಾಗಿ ದೆಹಲಿಯ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳು. ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲು ಮತ್ತು ದೆಹಲಿಯನ್ನು ವಿಶ್ವದ ನಂಬರ್‌.1 ರಾಜಧಾನಿ ಮಾಡಲು ಸಂಕಲ್ಪ ಮಾಡಿದೆ. ದೇಶಾದ್ಯಂತ ಸಾರ್ವಜನಿಕರಿಗೆ ಸುಳ್ಳು ಭರವಸೆಗಳನ್ನು ನೀಡುವವರಿಗೆ ದೆಹಲಿ ಮಾದರಿಯಾಗಲಿದೆ ಎಂದು ಭರವಸೆಗಳನ್ನು ಉಲ್ಲಂಘಿಸುವವರಿಗೆ ದೆಹಲಿ ಜನರು ಪಾಠವನ್ನು ಕಲಿಸಿದ್ದಾರೆ ಎಂದು ಹೇಳಿದ್ದಾರೆ.

Tags:
error: Content is protected !!