Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಭಾರೀ ಮಳೆ ಎಫೆಕ್ಟ್ : ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಶ್ರೀನಗರ : ಭಾರೀ ಮಳೆಯಿಂದಾಗಿ ಇಂದು ಗುಹಾ ದೇಗುಲಕ್ಕೆ ಎರಡೂ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಳೆದ ಶುಕ್ರವಾರ ರಾತ್ರಿಯಿಂದ ಬಾಲ್ಟಾಲ್‌ ಮತ್ತು ಪಹಲ್ಗಾಮ್‌ ಮಾರ್ಗಗಳಲ್ಲಿ ಭಾರೀ ಮಳೆ ಸುರಿದಿದೆ. ಹೀಗಾಗಿ ಯಾತಾರ್ಥಿಗಳ ಸುರಕ್ಷತೆಯ  ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದುವರೆಗೂ ೧ ಲಕ್ಷದ ೫೦ ಕ್ಕೂ ಹೆಚ್ಚು ಮಂದಿ ಭಕ್ತರು ೩೮೦೦ ಮೀಟರ್‌ ಎತ್ತರದ ಗುಹಾಂತರ ದೇಗುಲಕ್ಕೆ ಭೇಟಿ ನೀಡಿ ಲಿಂಗ ದರ್ಶನ ಮಾಡಿದ್ದಾರೆ.

ಆಗಸ್ಟ್‌ ೧೯ ರವರೆಗೆ ಯಾತ್ರೆ ಮುಂದುವರಿಯಲಿದ್ದು, ಮೊದಲ ವಾರದಲ್ಲಿ  ೧.೫೦ ಲಕ್ಷಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರು. ಆದರೆ ಗುಹೆಯಲ್ಲಿ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕರಗಿದ ಕಾರಣ ಈಗಷ್ಟೆ ಬಂದಿರುವ ಯಾತ್ರಿಕರು ನಿರಾಸೆಗೊಂಡಿದ್ದಾರೆ. ಕಳೆದ ಒಂದು ವಾರದಿಂದ ಅತೀ ಹೆಚ್ಚು ತಾಪಮಾನದಿಂದಾಗಿ ಶಿವಲಿಂಗ ಕರಗುವ ಪ್ರಕ್ರಿಯೆ ವೇಗಗೊಂಡಿದೆ. ೨೦೦೮ ರ ನಂತ್ರ ಯಾತ್ರೆಯ ಮೊದಲ ೧೦ ದಿನಗಳಲ್ಲಿ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕಣ್ಮರೆಯಾಗಿರುವುದು ಇದೇ ಮೊದಲ ಬಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags: