ಮುಂಬೈ: ದುಬೈನಿಂದ ಭಾರತಕ್ಕೆ ಚಿನ್ನವನ್ನು ಕಳ್ಳ ಸಾಗಾಣೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದ ಅಫ್ಘಾನಿಸ್ತಾನದ ಕಾನ್ಸುಲ್ ಜನರಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಸುಮಾರು 18 ಕೋಟಿ ಬೆಲೆಬಾಳುವ 25 ಕೆಜಿ ಚಿನ್ನವನ್ನು ಅಫ್ಘಾನ್ ರಾಯಭಾರಿ ಝಕಿಯಾ ವಾರ್ಡಕ್ ಅವರು ದುಬೈನಿಂದ ಭಾರತಕ್ಕೆ ಕಳ್ಳ ಸಾಗಾಣೆ ಮೂಲಕ ತರಲು ಪ್ರಯತ್ನಿಸಿದ್ದರು. ಈ ಘಟನೆ ಬಳಿಕ ಮಾತನಾಡಿರುವ ಅವರು, ಇದೊಂದು ವಯಕ್ತಿಕ ದಾಳಿ ಹಾಗೂ ಮಾನನಷ್ಟವಾಗಿದೆ. ಈ ವ್ಯವಸ್ಥೆಯೊಳಗಿನ ಏಕೈಕ ಮಹಿಳಾ ಪ್ರತಿನಿಧಿಯನ್ನು ಅನ್ಯಾಯವಾಗಿ ಗುರಿಯಾಗಿಸುವ ಉದ್ದೇಶವಾಗಿದೆ ಎಂದು ದೂರಿದ್ದಾರೆ.
ವಾರ್ಡಕ್ ಅವರು ತಮ್ಮ ಪುತ್ರನೊಂದಿಗೆ ದುಬೈನಿಂದ ಭಾರತಕ್ಕೆ ಆಗಮಿಸುವ ವೇಳೆ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಚಿನ್ನದೊಂದಿಗೆ ತಡೆಯಲಾಗಿತ್ತು. ಅವರು ರಾಜತಾಂತ್ರಿಕ ಅನುಮತಿ ಹೊಂದಿರುವ ಕಾರಣ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತೆ ವಿನಃ ಬಂಧಿಸಲಾಗಿರಲಿಲ್ಲ.