Mysore
22
overcast clouds

Social Media

ಬುಧವಾರ, 01 ಜುಲೈ 2026
Light
Dark

ಅಬುಧಾಬಿ-ಕೋಯಿಕ್ಕೋಡ್‌ವಿಮಾನ: ತುರ್ತು ಲ್ಯಾಂಡ್

ಅಬುಧಾಬಿ: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಇಂಜಿನ್ ವಿಫಲವಾಗಿದ್ದರಿಂದ ಏರ್ ಇಂಡಿಯಾ ವಿಮಾನವೊಂದು ಇಲ್ಲಿನ ಏರ್‌ಪೋರ್ಟ್‌ನಲ್ಲಿ ಶುಕ್ರವಾರ ತುರ್ತು ಲ್ಯಾಂಡ್ ಆಗಿದೆ. ಈ ವಿಮಾನವು ಅಬುಧಾಬಿಯಿಂದ ಕೋಯಿಕ್ಕೋಡ್‌ಗೆಹೊರಟಿತ್ತು. ಟೇಕಾಫ್ ಆಗಿ 1000  ಅಡಿ ಎತ್ತರ ಹಾರಿದ ಬಳಿಕ ಈ ಘಟನೆ ನಡೆದಿದೆ. ವಿಮಾನದಲ್ಲಿ ಅಗ್ನಿ ಕಾಣಿಸಿಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಲಾಗಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು. ಇಂಜಿನ್ ವಿಫಲವಾಗಿದ್ದರಿಂದ ಈ ರೀತಿ ಮಾಡಬೇಕಾಯಿತು ಎಂದು ಮೂಲಗಳು ಖಚಿತಪಡಿಸಿವೆ. 184 ಪ್ರಯಾಣಿಕರಿದ್ದ ಬೋಯಿಂಗ್ 737-800 ವಿಮಾನದಲ್ಲಿ ಈ ದೋಷ ಕಂಡು ಬಂದಿದ್ದು, ಎಲ್ಲಾ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ ಎಂದು ವಿಮಾನ ಸಂಸ್ಥೆಯ ವಕ್ತಾರ ಪ್ರತಿಕ್ರಿಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!