Mysore
22
haze

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಬ್ರೆಜಿಲ್‌ನಲ್ಲಿ 7.3 ಕೆ.ಜಿ ದೈತ್ಯ ಮಗು ಜನನ

ಲ್ಯಾನ್ಕೆಸ್ಟರ್: ಬ್ರೆಜಿಲ್ ಮಹಿಳೆಯೊಬ್ಬರು ಇತ್ತೀಚೆಗೆ 7.3 ಕೆ.ಜಿ ತೂಕದ, ಎರಡು ಅಡಿ ಉದ್ದದ ದೈತ್ಯ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಅಧಿಕ ತೂಕದ ದೈತ್ಯ ಶಿಶುಗಳನ್ನು ವ್ಯಾಕ್ರೋಸೋಮಿಯಾ ಶಿಶುಗಳು ಎಂದು ಹೇಳಲಾಗುತ್ತದೆ.
ಪಾರಿಂಟಿನ್ಸ್‌ನ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದು, ಆ್ಯಂಗರ್ಸನ್ ಸ್ಯಾಂಟೋಸ್ ಎಂದು ಹೆಸರಿಡಲಾಗಿದೆ. ವಿಶ್ವದಲ್ಲಿ ಇದಕ್ಕಿಂತ ತೂಕದ ಮಗು ಜನಿಸಿರುವ ಉದಾಹರಣೆ ಇದೆ. 1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ ತೂಕದ ಮಗು ಜನಿಸಿತ್ತು. ಜನನದ ಸಮಯದಲ್ಲಿ ಸಾಮಾನ್ಯವಾಗಿ ಗಂಡು ಮಗುವಿನ ತೂಕ 3.3 ಕೆ.ಜಿ ಮತ್ತು ಹೆಣ್ಣು ಮಗುವಿನ ತೂಕ 3.2 ಕೆ.ಜಿವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!