ಇಸ್ಲಾಮಾಬಾದ್: ವಿದ್ಯುತ್, ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಈಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬರೆ. ಭಾನುವಾರದಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 35 ರೂ. ಮತ್ತು ಡೀಸೆಲ್ ಲೀಟರ್‌ಗೆ 18 ರೂ. ಹೆಚ್ಚಿಸಿದೆ.
ಪೆಟ್ರೋಲಿಯಂ ಕೊರತೆಯ ಕುರಿತು ಪ್ರತಿಕ್ರಿಯಿಸಿದ ವಿತ್ತ ಸಚಿವ ಇಶಾಕ್‌ದಾರ್, ಕೃತಕ ಕೊರತೆ ಸೃಷ್ಟಿಸಲಾಗುತ್ತಿದೆ ಎಂದಿದ್ದಾರೆ.
ಇಂದಿನ ಏರಿಕೆಯೊಂದಿಗೆ, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 249.80 ರೂ. ಆಗಿದ್ದರೆ, ಡೀಸೆಲ್ ಲೀಟರ್‌ಗೆ 262.80 ರೂ., ಸೀಮೆಎಣ್ಣೆ ಲೀಟರ್‌ಗೆ 189.83 ರೂ. ಮತ್ತು ಡೀಸೆಲ್ ಉಪ ಉತ್ಪನ್ನ ಬೆಲೆ 187 ರೂ. ಆಗಿದೆ.





