Mysore
31
few clouds

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಸಶಸ್ತ್ರಧಾರಿಗಳಿಂದ ಭದ್ರತಾ ಪಡೆಗಳ ಶಿಬಿರದ ಮೇಲೆ ದಾಳಿ: ಇಬ್ಬರು ಯೋಧರ ಹತ್ಯೆ

ಮಣಿಪುರ: ಭದ್ರತಾ ಪಡೆಗಳ ಶಿಬಿರದ ಮೇಲೆ ಸಶಸ್ತ್ರಧಾರಿಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಮಣಿಪುರದ ಬಿಷ್ಣುಪುರ್‌ ಜಿಲ್ಲೆಯಲ್ಲಿ ಶನಿವಾರ (ಏ.27) ಮುಂಜಾನೆ ನಡೆದಿದೆ.

ಮಣಿಪುರದ ನರಂಸೇನಾ ಪ್ರದೇಶದಲ್ಲಿ ಶಂಕಿತ ಕುಕಿ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಮಣಿಪುರದ ಪೊಲೀಸರು ಮಾಹಿತಿ ದೃಢಪಡಿಸಿದ್ದು, ಮೃತರನ್ನು ಸಿಆರ್‌ಪಿಎಫ್‌ ಸಬ್‌ ಇನ್ಸ್‌ಸ್ಪೆಕ್ಟರ್‌ ಎನ್‌.ಸರ್ಕಾರ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಅರೂಪ್‌ ಸೈನಿ ಎಂದು ಗುರುತಿಸಲಾಗಿದೆ. ಇನ್ನು ಇನ್ಸ್‌ಪೆಕ್ಟರ್‌ ಜಾದವ್‌ ದಾಸ್‌ ಮತ್ತು ಪೇದೆ ಅಫ್ತಾಬ್‌ ದಾಸ್‌ ಅವರು ಗಾಯಗೊಂಡಿರುವವರಾಗಿದ್ದಾರೆ.

ಐಆರ್‌ಬಿಎನ್‌ ಶಿಬಿರದ ಭದ್ರತೆಗಾಗಿ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ವೇಳೆ ಸಶಸ್ತ್ರದಾರಿಗಳು ಭದ್ರತಾ ಪಡೆಗಳ ಶಿಬಿರವನ್ನು ಗುರಿಯಾಗಿಸಿಕೊಂಡು ಬೆಟ್ಟದ ತುದಿಯಿಂದ ನಾರಾಯಣಸೇನೆ ಎಂಬ ಹಳ್ಳಿಯ ಕಡೆಗೆ ನಿರಂತರ ಗುಂಡಿನ ದಾಳಿ ನಡೆಸಿದ್ದು, ಮಧ್ಯರಾತ್ರಿ 12.30 ರಿಂದ 2.15ರವರೆಗೆ ಗುಂಡಿನ ದಾಳಿ ಮುಂದುವರೆದಿದೆ. ಅಲ್ಲದೇ ಬಾಂಬ್‌ ದಾಳಿ ಕೂಡ ನಡೆಸಲಾಗಿದೆ. ಇದರಿಂದಾಗಿ ಸಿಆರ್‌ಪಿಎಫ್‌ನ ಬೆಟಾಲಿಯನ್‌ ಔಟ್‌ಪೋಸ್ಟ್‌ ಸ್ಟೋಟಗೊಂಡಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Tags:
error: Content is protected !!