ಮೈಸೂರು : ನೇಪಾಳದ ಪರಿಸ್ಥಿತಿ ರಾಜ್ಯಕ್ಕೂ ಬರಲಿದೆ. ರಾಜ್ಯದಲ್ಲಿ ಜನರಿಂದ ಕ್ರಾಂತಿಯಾಗಲಿದೆ. ಸಿದ್ದರಾಮಯ್ಯ ಇದೇ ಧೋರಣೆಯಲ್ಲಿದ್ದರೆ ಶೀಘ್ರವೇ ಸರ್ಕಾರ ಪತನವಾಗಲಿದೆ. ರಾಜ್ಯದ ಜನರು ತಾಳ್ಮೆ ಕಳೆದುಕೊಂಡಿದ್ದು, ಸದ್ಯದಲ್ಲೇ ಕ್ರಾಂತಿಯ ಹಾದಿ ಹಿಡಿಯಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯನವರ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾಯಿ ಚಾಮುಂಡಿದೇವಿಯ ಶಾಪ ತಟ್ಟಲಿದೆ. ತಾಯಿ ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ರಾಜಕೀಯ ಅಂತ್ಯವಾಗುವುದು ಖಚಿತ ಎಂದು ಹೇಳಿದರು.
ಮೌಲ್ವಿಗಳು ಮಾತನಾಡಲಿ ;
ದಸರಾ ಉದ್ಘಾಟನೆಯಿಂದ ಲೇಖಕಿ ಬಾನು ಮುಷ್ತಾಕ್ ಹಿಂದೆ ಸರಿಯಲಿ. ಮೂರ್ತಿ ಪೂಜೆ ಮಾಡುವವರು ಇಸ್ಲಾಂ ಪ್ರಕಾರ ಕಾಫೀರರು. ಮೂರ್ತಿ ಪೂಜೆ ಮಾಡುವವರನ್ನು ಕೊಲ್ಲಿ ಎಂದು ಇಸ್ಲಾಂ ಹೇಳುತ್ತದೆ. ಈಗ ಬಾನು ಮುಷ್ತಾಕ್ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ. ಇಸ್ಲಾಂ ಧರ್ಮದ ಬಗ್ಗೆ ಮಾತನಾಡುವ ಮೌಲ್ವಿಗಳು ಈ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.





