ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದ್ದು, ಇಂದು ಜಿಲ್ಲಾಡಳಿತದಿಂದ ರಾಜಮನೆತನಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಅರಮನೆಗೆ ಭೇಟಿ ನೀಡಿದ ಜಿಲ್ಲಾಡಳಿತವು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ದಸರಾಗೆ ಅಧಿಕೃತ ಆಹ್ವಾನ ನೀಡಿತು. ಈ ವೇಳೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಸ್ವಾಭಿಮಾನ ಬದುಕಿಗೆ ಶಿಕ್ಷಣವೇ ಮದ್ದು : ಸಿಎಂ ಸಿದ್ದರಾಮಯ್ಯ
ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು, ರಾಜ ಮನೆತನಕ್ಕೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿದೆ. ನಗುಮೊಗದಿಂದ ನಮ್ಮನ್ನು ಬರಮಾಡಿಕೊಂಡರು. ಅವರೂ ಎಂದಿಗೂ ಕಿರಿಕಿರಿ ಮಾಡಿಲ್ಲ. ನಾಡಹಬ್ಬ ಯಶಸ್ಸಿಗೆ ಸಹಕಾರ ಕೊಡುವುದಾಗಿ ಹೇಳಿದ್ದಾರೆ. ಕೆಲ ಸಲಹೆಗಳನ್ನು ನೀಡಿದ್ದಾರೆ. ಕಳೆದ ಬಾರಿ ಆರಮನೆ ಆವರಣದಲ್ಲಿ ಆಸನ ವ್ಯವಸ್ಥೆ ಹೆಚ್ಚಾಗಿ ಮಾಡಲಾಗಿತ್ತು. ಮಳೆ ಬಂದಾಗ ಕೆಲ ತೊಂದರೆಗಳು ಉಂಟಾಗಿದ್ದವು. ಈ ಬಾರಿ ಅವರ ಸಲಹೆಯಂತೆ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ. ದಸರಾ ಚೆನ್ನಾಗಿ ನಡೆಯಲಿ ಎಂಬುದನ್ನು ಹೊರತುಪಡಿಸಿ ಬೇರೆನೂ ಹೇಳಿಲ್ಲ ಎಂದು ಹೇಳಿದರು.





