Mysore
22
broken clouds

Social Media

ಸೋಮವಾರ, 26 ಜನವರಿ 2026
Light
Dark

ಮೈಸೂರು ದಸರಾ 2025: ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದ್ದು, ಗಜಪಡೆ ಜಂಬೂಸವಾರಿಗೆ ಸಜ್ಜಾಗುತ್ತಿವೆ.

ಕಲಾವಿದ ನಾಗಲಿಂಗಸ್ವಾಮಿ ಹಾಗೂ ತಂಡ ದಸರಾ ಗಜಪಡೆಯನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಿದ್ದು, 14 ಆನೆಗಳಿಗೆ ಬಣ್ಣ ಚಿತ್ತಾರ ಬಿಡಿಸುತ್ತಿದ್ದಾರೆ. ಗಜಪಡೆ ಬಣ್ಣ ಬಣ್ಣಗಳಿಂದ ಸಿಂಗಾರಗೊಳ್ಳುತ್ತಿದ್ದು, 8 ಮಂದಿ ತಂಡದಿಂದ ಬಣ್ಣ ಹಾಕುವ ಕಾರ್ಯ ಪ್ರಗತಿಯಲ್ಲಿದೆ‌.

ಇದನ್ನು ಓದಿ : ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕೌಂಟ್‌ಡೌನ್‌

ಗಜಪಡೆಗೆ ನವಿಲು,ಗಂಡಬೇರುಂಡ ಹಾಗೂ ಬಳ್ಳಿಗಳ ಚಿತ್ತಾರಗಳನ್ನ ಬಿಡಿಸುತ್ತಿರುವ ಕಲಾವಿದರ ತಂಡವು, ಸೊಂಡಿಲು,ಕಣ್ಣು,ಕಿವಿ,ಕಾಲು ಗಳ ಮೇಲೆ ಆಕರ್ಷಕ ಚಿತ್ತಾರಗಳನ್ನ ಬಿಡಿಸುತ್ತಿದ್ದಾರೆ.

ಈ ಮೂಲಕ ಜಂಬೂಸವಾರಿ ಮೆರವಣಿಗೆಗೆ ದಸರಾ ಗಜಪಡೆಗೆ ಸನ್ನದ್ದವಾಗಿದ್ದು, ಜಂಬೂಸವಾರಿ ವೀಕ್ಷಣೆಗೆ ಕೋಟ್ಯಾಂತರ ಜನರು ಕಾತುರದಿಂದ ಕಾಯುತ್ತಿದ್ದಾರೆ.

Tags:
error: Content is protected !!