ಮೈಸೂರು: ದಸರಾ ಚಲನ ಚಿತ್ರೋತ್ಸವ ಸಮಿತಿಯ ವತಿಯಿಂದ ಏರ್ಪಡಿಸಿದ್ದ ಕಿರು ಚಿತ್ರ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್ ಸಿ ಮಹದೇವಪ್ಪ ವಿತರಣೆ ಮಾಡಿದರು.
ಮಂಗಳವಾರ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಹಮ್ಮಿಕೊಂಡಿದ್ದ ದಸರಾ ಚಲನ ಚಿತ್ರೋತ್ಸವ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಕಿರು ಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಬಹುಮಾನ ವಿತರಿಸಿದರು.
ಬಳಿಕ, ದಸರಾ ಚಲನಚಿತ್ರೋತ್ಸವ ಸಮಿತಿಯ ಉಪ ವಿಶೇಷಾಧಿಕಾರಿಗಳಾದ ಡಾ ಬಸವರಾಜ್ ಕೆ.ಎನ್. ಮಾತನಾಡಿ, ಕಿರು ಚಿತ್ರ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿತ್ತು, 73 ಚಿತ್ರಗಳು ಸ್ಪರ್ಧೆಯಲ್ಲಿ ಭಾಗವಿಸಿದ್ದವು. 4 ಜನರ ತೀರ್ಪುಗಾರರ ತಂಡ ಕಿರು ಚಿತ್ರಗಳನ್ನು ವೀಕ್ಷಿಸಿ ಆಯ್ಕೆ ಮಾಡಿತ್ತು. ಈ ಕಿರುಚಿತ್ರಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ ಎಂದರು.
ಕಿರುಚಿತ್ರ ಸ್ಪರ್ಧೆ ವಿಜೇತರು
ದಿಲೀಪ್ ಕುಮಾರ್ ನಿರ್ದೇಶನದ ಪೋಲಾರ್(ಪ್ರಥಮ), ಅಭಿಜಿತ್ ಪುರೋಹಿತ್ ನಿರ್ದೇಶನಕ ಲಕ್ಷ್ಮಿ(ದ್ವಿತೀಯ), ಎಸ್.ಪಿ. ಪವನ್ ನಿರ್ದೇಶಕನದ ಅನ್ವಾನ್ಟೆಡ್ ಕಿಡ್(ತೃತೀಯ) ಸ್ಥಾನ ಪಡೆದರೆ. ಸ್ಟ್ಯಾನಿ ಜಾಯ್‌ಸನ್ ನಿರ್ದೇಶನದ ತ್ರಿಕಾಲಮ್ ಚಿತ್ರಕ್ಕೆ ಉತ್ತಮ ಸಂಕಲನಕಾರ ಹಾಗೂ ಕೃತಾರ್ತ್ ಮಂಡೆಕುಟ್ಟಂಡ ನಿರ್ದೇಶನದ ವರ್ತಕಾಲಿ ಚಿತ್ರಕ್ಕೆ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿತು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ, ಚಲನ ಚಿತ್ರ ನಟರಾದ ಮಂಡ್ಯ ರಮೇಶ್, ವಿಧಾನ ಪರಿಷತ್ ಸದಸ್ಯರಾದ ಡಿ ತಿಮ್ಮಯ್ಯ,ದಸರಾ ಚಲನ ಚಿತ್ರೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಕಾಶಿನಾಥ್, ಬೃಂದ ಕೃಷ್ಣೇಗೌಡ, ರಮೇಶ್, ಸಯ್ಯದ್ ಅಬ್ರಹಾಂ, ತೀರ್ಪುಗಾರರಾದ ಪ್ರೊ ಸ್ವಪ್ನಾ, ಸಮಿತಿಯ ಕಾರ್ಯಾಧ್ಯಕ್ಷ ರಂಗೇಗೌಡ, ಸಮಿತಿ ಕಾರ್ಯದರ್ಶಿ ಹರೀಶ್ ಟಿ.ಕೆ ಹಾಗೂ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.