ಮೈಸೂರು: ಆನೆ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಅರ್ಜುನ ಆನೆಯ ನೆನಪಿನಾರ್ಥ ಕಲಾ ಸತೀಶ್ ಅವರು ಮೈಸೂರು ದಸರಾ ಸಲುವಾಗಿ ಆಗಮಿಸಿರುವ 65 ಮಾವುತ ಕುಟುಂಬ ವರ್ಗದವರಿಗೆ ಜಮಖಾನ ಮತ್ತು ಬೆಡ್‌ಶೀಟ್‌ಗಳನ್ನು ವಿತರಿಸಿದರು.
ಅರ್ಜುನ ಆನೆಯು ನಾಡಹಬ್ಬ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿಯನ್ನು 7 ಬಾರಿ ಹೊತ್ತು ಕಳೆದ ವರ್ಷ(2023) ಕಾಡಾನೆ ಸೆರೆ ಹಿಡಿಯುವಾಗ ಕಾರ್ಯಾಚರಣೆಯಲ್ಲಿ ವೀರ ಮರಣವನ್ನು ಹೊಂದಿತ್ತು. ಈ ವರ್ಷ ಅರ್ಜುನ ಆನೆಯ ಸ್ಮರಣಾರ್ಥ ಕಲಾ ಸತೀಶ್ ಅವರು ಮೈಸೂರು ದಸರಾ ಜಂಬೂ ಸವಾರಿಗಾಗಿ ಅರಮನೆಯ ಆವರಣದಲ್ಲಿ ತಂಗಿರುವ ಮಾವುತ ಕುಟುಂಬಗಳಿಗೆ ಜಮಖಾನ ಹಾಗೂ ಬೆಡ್‌ಶಿಟ್‌ಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಿಎಫ್‌ಒ ಪ್ರಭುಗೌಡ, ಆರ್‌ಎಫ್ ಸಂತೋಷ್‌ಕುಮಾರ್, ಆದಿತ್ಯ ಸುಬ್ರಮಣ್ಯ, ಪ್ರಶಾಂತ್, ಸಂತೋಷ್ ನವೀನ್, ಪ್ರಜ್ವಲ್, ಮಾನ್ಯ ಹಾಗೂ ಹರ್ಷ ಉಪಸ್ಥಿತರಿದ್ದರು.