ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಕಣೆಯಾದ ಜಂಬೂಸವಾರಿ ಮೆರವಣಿಗೆ ಸಾಗುವಾರ ಮಳೆಯ ಸಿಂಚನವಾಗಿದೆ. ಆದರೆ, ಮಳೆಯನ್ನು ಲೆಕ್ಕಿಸದ ಜನ ಉತ್ಸಹದಿಂದ ಜಂಬೂಸವಾರಿಯನ್ನ ಕಣ್ತುಂಬಿಕೊಂಡಿದ್ದಾರೆ.
ಅಲ್ಲದೇ, ಮೆರವಣಿಗೆ ಉದ್ದಕ್ಕೂ ಸ್ತಬ್ದಚಿತ್ರ ಸಾಗುವ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ತಮಟೆ ಹಾಗೂ ಡ್ರಮ್ಸ್‌ಸೆಟ್ ಬಾರಿಸುವವರ ಹುಮ್ಮಸ್ಸು ಸ್ವಲ್ವವೂ ಕಡಿಮೆಯಾಗದೇ ವಾದ್ಯ ನುಡಿಸಿದ್ದಾರೆ.
ಸ್ತಬ್ದಚಿತ್ರ ಮೆರವಣಿಗೆಯ ವೇಳೆ ವಿಜಯನಗರದ ಟ್ಯಾಬ್ಲೋ ಮುಂದೆ ಡ್ರಮ್ ಹಾಗೂ ತಮಟೆ ಬಾರಿಸುವವರ ನಡುವೆ ಜುಗಲ್‌ಬಂದಿ ನಡೆಯಿತು. ಆದರೆ, ಇಲ್ಲಿ ತಮಟೆ ಬಾರಿಸುವ ತಂಡದಲ್ಲಿದ್ದ ಒಬ್ಬ ಮಹಿಳೆ ಆವೇಶಕ್ಕೊಳಗಾದವರ ಹಾಗೇ ಬಾರಿಸಿದ್ದಾರೆ. ಈ ಸಂದರ್ಭದಲ್ಲಿ ವಾದ್ಯಮೇಳವನ್ನು ಸಾರ್ವಜನಿಕರು ಎಂಜಾಯ್ ಮಾಡಿದ್ದಾರೆ.