Mysore
29
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಎರಡನೇ ತಂಡದ ಗಜಪಡೆಗೆ ತೂಕ ಪರೀಕ್ಷೆ

dasar 2 batch

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಿನ್ನೆ ತಾನೇ ಮೈಸೂರಿಗೆ ಆಗಮಿಸಿರುವ ಎರಡನೇ ತಂಡದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.

ನಿನ್ನೆ ಸಂಜೆ ಕಾಡಿನಿಂದ ಮೈಸೂರು ಅರಮನೆಗೆ ಎರಡನೇ ಹಂತದ ದಸರಾ ಗಜಪಡೆ ಆಗಮಿಸಿದ್ದು, ಇಂದು ಅವುಗಳಿಗೆ ತೂಕ ಪರೀಕ್ಷೆ ನಡೆಸಲಾಯಿತು.

ಮೈಸೂರು ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಪರಿಶೀಲನೆಯಲ್ಲಿ ಹೇಮಾವತಿ 2440 ಕೆಜಿ, ಶ್ರೀಕಂಠ 5540 ಕೆಜಿ, ಸುಗ್ರೀವ 5545 ಕೆಜಿ, ರೂಪ 3320 ಕೆಜಿ ಹಾಗೂ ಗೋಪಿ 4990 ಕೆಜಿ ತೂಕವಿದೆ.

ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಸರಾ ಗಜಪಡೆಗಳು ಜಂಬೂಸವಾರಿ ಮೆರವಣಿಗೆಗೆ ತಾಲೀಮು ನಡೆಸಲಿದ್ದು, ಬೆಳಿಗ್ಗೆ ಸಂಜೆ ಎರಡು ಸಮಯವೂ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ.

ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಎಲ್ಲಾ ಆನೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಜಂಬೂಸವಾರಿ ಮೆರವಣಿಗೆಗೆ ಎಲ್ಲಾ ರೀತಿಯಲ್ಲೂ ತಯಾರಿ ನಡೆಸಲಾಗುತ್ತಿದೆ.

Tags:
error: Content is protected !!