ಮೈಸೂರು: ಸೆಪ್ಟೆಂಬರ್ ಮೊದಲ ಅಥವಾ 2 ನೇ ವಾರದಲ್ಲಿ ಉದ್ಘಾಟಕರು ಹಾಗೂ ಮುಖ್ಯಮಂತ್ರಿ, ಅಪ್ ಮುಖ್ಯಮಂತ್ರಿ, ರಾಜ್ಯಪಾಲರಿಗೆ ದಸರಾಗೆ ಅಧಿಕೃತ ಆಹ್ವಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ದಸರಾ ಮಹೋತ್ಸವದ ಸಿದ್ಧತೆಗಳು ಆರಂಭಗೊಂಡಿದ್ದು, ಸಾಂಸ್ಕೃತಿಕ ದಸರಾ ಮೆರವಣಿಗೆ ಸೇರಿದಂತೆ ದಸರಾ ಉಪ ಸಮಿತಿಗಳನ್ನು ನೇಮಕಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಮೊದಲ ಹಾಗೂ ಎರಡನೇ ತಂಡದ ಒಟ್ಟು 14 ಆನೆಗಳಿಗೆ ಪ್ರತಿದಿನ ಎರಡು ಬಾರಿ ಜಂಬೂ ಸವಾರಿ ಸಾಗುವ ರಾಜಮಾರ್ಗಗಳಲ್ಲಿ ತಾಲೀಮು ನಡೆಸಲಾಗುತ್ತಿದೆ. ಎಲ್ಲಾ ಆನೆಗಳು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ, 14 ಆನೆಗಳು ಅರೋಗ್ಯಯುತವಾಗಿದೆ, ಮುಂದಿನ ದಿನಗಳಲ್ಲಿ ಚಿನ್ನದ ಅಂಬಾರಿ ಹೊರುವ ಆನೆಗಳಿಗೆ ಬಾರ ಹೊರಿಸುವ ತಾಲೀಮು ನಡೆಸಲಾಗುವುದು ಎಂದು ಹಿರಿಯ ಅರಣ್ಯಾಧಿಕಾರಿ ಪ್ರಭುಗೌಡ ತಿಳಿಸಿದರು.





