Mysore
21
clear sky

Social Media

ಗುರುವಾರ, 26 ಮಾರ್ಚ್ 2026
Light
Dark

ನ್ಯಾಯಾಧೀಶರ ತೀರ್ಪನ್ನು ಪರಾಮರ್ಶೆ ಮಾಡುವ ಶಕ್ತಿ ನಮಗಿಲ್ಲ: ಶಾಸಕ ಜಿ.ಟಿ.ದೇವೇಗೌಡ

mla devegowd

ಮೈಸೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್‌ ತೀರ್ಪು ಪ್ರಕಟಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಧೀಶರ ತೀರ್ಪನ್ನು ಪರಾಮರ್ಶೆ ಮಾಡುವ ಶಕ್ತಿ ನಮಗಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪತ್ರಿಕಾರಂಗ, ಶಾಸಕಾಂಗ ಸೇರಿದಂತೆ ಯಾವುದೇ ಅಂಗದಲ್ಲಿ ತಪ್ಪಾದರೆ ಶಿಕ್ಷೆ ಕೊಡೋದು ನ್ಯಾಯಾಂಗ.
ನ್ಯಾಯಾಂಗ ಕೊಡೋದು ದೇವರ ತೀರ್ಪು ಎಂದೇ ಜನರು ನಂಬಿದ್ದಾರೆ. ಇದರ ಜೊತೆಯಲ್ಲಿ ಮೇಲ್ಮನವಿ ಹೋಗಬಹುದು. ನ್ಯಾಯಾಧೀಶರ ತೀರ್ಪುನ್ನು ಪರಾಮರ್ಶೆ ಮಾಡುವ ಶಕ್ತಿ ನಮಗಿಲ್ಲ ಎಂದರು.

ಇನ್ನು ಕೆಆರ್‌ಎಸ್‌ಗೆ ಟಿಪ್ಪು ಸುಲ್ತಾನ್‌ ಅಡಿಗಲ್ಲು ಹಾಕಿದ್ದು ಎಂಬ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಡಿಗಲ್ಲು ಹಾಕಿ ಕೆಆರ್‌ಎಸ್ ಪ್ರಾರಂಭ ಮಾಡಿದ್ದು ರಾಜರು ಎಂದು ಎಲ್ಲರಿಗೂ ಗೊತ್ತು. ಆದರೆ ಶಿಲಾನ್ಯಾಸ ಇದೇ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಅದರ ಇತಿಹಾಸದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

Tags:
error: Content is protected !!