Mysore
18
few clouds

Social Media

ಮಂಗಳವಾರ, 13 ಜನವರಿ 2026
Light
Dark

ರಾಜ್ಯ ಸರ್ಕಾರ ಜಿಲ್ಲೆಗೊಂದು ಮಿನಿ ಚಿತ್ರಮಂದಿರ ನಿರ್ಮಿಸಬೇಕು: ಸಾಹಿತಿ ಬರಗೂರು ರಾಮಚಂದ್ರಪ್ಪ

ಮೈಸೂರು: ಕನ್ನಡ ಚಲನಚಿತ್ರೋದ್ಯಮದ ಉತ್ತಜನ ಹಾಗೂ ಪ್ರೋತ್ಸಾಹಕ್ಕಾಗಿ ರಾಜ್ಯ ಸರ್ಕಾರ ಜಿಲ್ಲೆಗೊಂದು ಮಿನಿ ಚಿತ್ರಮಂದಿರ ನಿರ್ಮಿಸಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.

ನಗರದ ರಂಗಾಯಣದಲ್ಲಿ ಆಯೋಜಿಸಿರುವ ಬಹುರೂಪಿ ಬಾಬಾ ಸಾಹೇಬ್ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಭೂಮಿಗೀತ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್ ಯುಗದಲ್ಲಿ ಡಾ.ರಾಜಕುಮಾರ್ ಬರುವ ತನಕ 70 ಸಿನಿಮಾಗಳನ್ನು ಬಂದಿರಲಿಲ್ಲ. ಆದರೆ ರಾಜಕುಮಾರ್ ಕನ್ನಡ ಚಿತ್ರರಂಗಕ್ಕೆ ಬಂದ 14 ವರ್ಷಗಳಲ್ಲಿ 100 ಸಿನಿಮಾಗಳನ್ನು ಒಬ್ಬರೇ ನಟಿಸಿದ್ದರು. ಉಳಿದಂತೆ ಆ ಕಾಲಘಟ್ಟದಲ್ಲಿ ಉಳಿದ ಎಲ್ಲಾ ನಟರು 100 ಸಿನಿಮಾ ಮಾಡಿದರೆ ಡಾ ರಾಜ್ ಒಬ್ಬರೇ ನೂರು ಸಿನಿಮಾಗಳಲ್ಲಿ ನಟಿಸಿದ್ದರು. ಚಲನಚಿತ್ರಗಳಲ್ಲಿ ಆತ್ಮವಿರುವ ಸಿನಿಮಾಗಳು ಮಾತ್ರ ಗೆಲ್ಲಲಿವೆ. ಆದರೆ ದೇಹವಿರುವ ಸಿನಿಮಾಗಳು ಗೆಲ್ಲಲಾರವು ಎಂದರು.

ಮಾಲ್ ನಲ್ಲಿ ಸಿನಿಮಾ ಪ್ರದರ್ಶನದ ಸಂಸ್ಕೃತಿ ಇಂದು ಬಂದಿದೆ, ಮಾಲ್ ನಲ್ಲಿ ಸಿನಿಮಾ ವೀಕ್ಷಣೆಗೆ ಹೋಗಬೇಕಾದರೆ ಪಾಪ್ ಕಾರ್ನ್ ಗೆ ಅಂತಲೇ 100 ರೂ ಖರ್ಚು ಮಾಡಬೇಕು. ಆದ್ದರಿಂದ ಸಿನಿಮಾ ವೀಕ್ಷಣೆಯು ದುಬಾರಿಯಾಗಿದೆ.

ಕೇರಳ ರಾಜ್ಯದಲ್ಲಿ 100ಕ್ಕೂ ಹೆಚ್ಚು ಮಿನಿಚಿತ್ರಮಂದಿರಗಳಿವೆ, ಅದರಂತೆ ನಮ್ಮ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರಾಯೋಗಿಕವಾಗಿ ಒಂದೊಂದು ಮಿನಿ ಚಿತ್ರಮಂದಿರಗಳು ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕಳೆದ ವರ್ಷವೇ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿದ್ದ ಅವರು ಒಪ್ಪಿಗೆಯನ್ನು ನೀಡಿದ್ದರು. ಕಳೆದ ವರ್ಷದ ಬಜೆಟ್‌ನಲ್ಲಿ ತರುವ ಮುನ್ನ ಮಿನಿ ಚಿತ್ರಮಂದಿರದಿಂದ ಮಲ್ಟಿಪ್ಲೆಕ್ಸ್ ಗೆ ಭಾರೀ ಹೊಡೆತ ಬೀಳುತ್ತದೆ ಎಂದು ಯಾರೋ ತಪ್ಪು ಸಲಹೆ ನೀಡಿದರು. ಆದ್ದರಿಂದ ಆ ಕಾರ್ಯ ಸಾಧ್ಯವಾಗಲಿಲ್ಲ, ಆದರೆ ಈ ವೇದಿಕೆಯಿಂದ ಮತ್ತೆ ಮುಖ್ಯಮಂತ್ರಿಗಳಿಗೆ ಜಿಲ್ಲೆಗೊಂದು ಮಿನಿ ಚಿತ್ರಮಂದಿರಗಳು ನಿರ್ಮಿಸುವಂತೆ ಮನವಿಯನ್ನು ಸಲ್ಲಿಸುತ್ತೇನೆ ಎಂದರು.

ಬಹುರೂಪಿಯಲ್ಲಿ ಅಂಬೇಡ್ಕರ್ ಕುರಿತು ಚಲನಚಿತ್ರೋತ್ಸವ ನಡೆಸುತ್ತಿರುವುದು ಸಂತಸ ತಂದಿದೆ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರ್, ಹಿರಿಯ ಅಧಿಕಾರಿ, ಕೆ ಎಂ ಗಾಯತ್ರಿ. ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

Tags:
error: Content is protected !!