Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ನಿಜ ಕೂಗೂಮಾರಿ ಪ್ರತಾಪ್‌ ಸಿಂಹ : ಸುಬ್ರಹ್ಮಣ್ಯ ಲೇವಡಿ

ಮೈಸೂರು : ಕೂಗು ಮಾರಿಗಳಿರುವುದು ರಾಜ್ಯ ಸರ್ಕಾರದಲ್ಲಿ ಅಲ್ಲ, ನಿಜವಾದ ಕೂಗುಮಾರಿ ಪ್ರತಾಪ್ ಸಿಂಹ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಲೇವಡಿ ಮಾಡಿದ್ದಾರೆ.

ಮೈಸೂರು ದಸರಾಕ್ಕೆ ಮೊದಲ ಕೂಗುಮಾರಿಯೇ ಪ್ರತಾಪ್‌ಸಿಂಹ. ಬಾನು ಮುಷ್ತಾಕ್ ಅವರ ಯಾವುದೋ ಒಂದು ವೀಡಿಯೋ ತುಣುಕನ್ನು ಹಾಕಿ ಇಡೀ ಹಿಂದೂ-ಮುಸ್ಲಿಂ ಬಾಂಧವರ ನಡುವೆ ಎತ್ತಿಕಟ್ಟುವ ಕೆಲಸ ಮಾಡಿದ್ದು ಇದೇ ಪ್ರತಾಪ್ ಸಿಂಹ. ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲೂ ಛೀಮಾರಿ ಹಾಕಿಸಿಕೊಂಡರು. ಜನರ ಕಾಯಕ ಮಾಡುತ್ತಿರುವ ಸಿದ್ದರಾಮಯ್ಯನವರ ಜನಪರ ಕೆಲಸಗಳು ಪ್ರತಾಪ್ ಸಿಂಹ ಅವರಿಗೆ ಕಾಣುತ್ತಿಲ್ಲ. ಹೀಗಾಗಿ ಪದೇ ಪದೇ ಮೈಸೂರಿನಲ್ಲಿ ತಾನು ಬದುಕಿದ್ದೇನೆ ಎಂಬುದನ್ನು ತೋರಿಸಲು ಟೀಕೆ ಮಾಡುತ್ತಿರುವ ನಿಜವಾದ ಕೂಗುಮಾರಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:-ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟದ್ದು : ಸಚಿವ ಚಲುವರಾಯಸ್ವಾಮಿ

ಮೈಸೂರಿನಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ನಡೆದದ್ದು ಘೋರ ಕೃತ್ಯ, ಅದನ್ನು ಯಾರೂ ಸಹಿಸಲ್ಲ. ಕೃತ್ಯ ಎಸಗಿದ ಕಿಡಿಗೇಡಿಯನ್ನ ಗಲ್ಲಿಗೇರಿಸಬೇಕು ಎಂಬುದೂ ನಮ್ಮ ಒತ್ತಾಯವೂ ಆಗಿದೆ. ಈ ಘಟನೆ ದಸರಾ ಮುಗಿದ ಮೇಲೆ ಆಗಿದೆ. ಇದನ್ನು ನಾಡಹಬ್ಬಕ್ಕೆ ಹೋಲಿಸಿ ಧಕ್ಕೆ ತರುವುದು ಸಲ್ಲದು. ಅಲ್ಲದೇ ಘಟನೆಗೆ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ. ಎನ್‌ಡಿಎ ಅಧಿಕಾರದಲ್ಲಿ ಇರುವ ಬಿಹಾರದಲ್ಲಿ, ಬಿಜೆಪಿ ಇರುವ ಉತ್ತರ ಪ್ರದೇಶದಲ್ಲಿ ಪ್ರತಿದಿನ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ತಾಕತ್ತಿದ್ದರೆ ಹೋಗಿ ಯೋಗಿ ಅವರ ವಿರುದ್ಧ ಪ್ರತಾಪ್‌ಸಿಂಹ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

ಇನ್ನು ನಳಪಾಕ್‌ನಲ್ಲಿ ಕಾಫಿ ಕುಡಿಯಲು, ಮೈಲಾರಿ ದೋಸೆ ತಿನ್ನಲು ಅಷ್ಟೇ ಪೊಲೀಸರ ಬಳಕೆ ಮಾಡುತ್ತಿ ದ್ದಾರೆ ಎನ್ನುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಭದ್ರತೆ ಕೊಡುವುದು ಸಿದ್ದರಾಮಯ್ಯ ಅಂತ ಅಲ್ಲ. ಮುಖ್ಯಮಂತ್ರಿಗಳು ಯಾರಿದ್ದರೂ ಅವರಿಗೆ ಸೂಕ್ತ ಭದ್ರತೆ ಕೊಟ್ಟೇ ಕೊಡುತ್ತಾರೆ. ಕಾರ್ಯಕ್ರಮ ನಿಮಿತ್ತ ಬಂದಾಗ ಊಟ, ತಿಂಡಿ ಮಾಡಲೇಬೇಕಲ್ಲವೇ? ಮೋದಿ ಅವರು ಮೈಸೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾಗ ಎಷ್ಟು ಖರ್ಚಾಗಿತ್ತು? ಆಗ ಎಷ್ಟು ಜನ ಭದ್ರತೆಗೆ ಇದ್ದರು? ಇದ್ಯಾವುದು ತಲೆಯಲ್ಲಿ ಇಲ್ವೆ? ಮೋದಿ ಅವರನ್ನೂ ಹೀಗೇ ಪ್ರಶ್ನೆ ಮಾಡಲು ಪ್ರತಾಪ್‌ಸಿಂಹಗೆ ಧೈರ್ಯ ಇದೆಯಾ ? ಎಂದು ಕುಟುಕಿದ್ದಾರೆ.

Tags:
error: Content is protected !!