Mysore
27
light rain

Social Media

ಭಾನುವಾರ, 02 ಆಗಸ್ಟ್ 2026
Light
Dark

ಮೈಸೂರು| ಮಗು ಹುಟ್ಟಿದ ಮಾರನೇ ದಿನವೇ ತಂದೆ ಸಾವು

ಮೈಸೂರು: ಇಲ್ಲಿನ ಚೆಲುವಾಂಬ ಆಸ್ಪತ್ರೆಗೆ ಹೆರಿಗೆಗಾಗಿ ತನ್ನ ಹೆಂಡತಿಯನ್ನು ಕರೆತಂದಿದ್ದ ವ್ಯಕ್ತಿಯೂ  ರಾತ್ರಿ ಆಸ್ಪತ್ರೆ ಆವರಣದಲ್ಲಿ ಮಲಗಿದ್ದರು. ಆದರೆ ಆ ವ್ಯಕ್ತಿ ಮುಂಜಾನೆಯೊಳಗೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಆಸ್ಪತ್ರೆಯಲ್ಲಿ ರಾತ್ರಿ ಮಲಗಿದ್ದ ವ್ಯಕ್ತಿಯೂ ಹೆಂಡತಿ ಹೆರಿಗೆಗೆ ಕರೆದುಕೊಂಡು ಬಂದಿದ್ದು, ಹೆಂಡತಿಗೆ ಮಗು ಹುಟ್ಟಿದ ಮಾರನೇ ದಿನವೇ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಚೌಡಳ್ಳಿ ಗ್ರಾಮದ ನಾಗೇಶ್‌(47) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯೂ ರಾತ್ರಿ ಸುಮಾರು 10.30 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿ  ಮಲಗಿದ್ದರು. ಅವರನ್ನು ಸುಮಾರು 7 ಗಂಟೆಗೆ ನೋಡಿದಾಗ ಅವರು ಮೃತಪಟ್ಟಿದ್ದರು. ಆದರೆ ಮೃತನ ಸಂಬಂಧಿಗಳು 12 ಗಂಟೆಯಾದರೂ ಬಾರದ ಹಿನ್ನೆಲೆಯಲ್ಲಿ ಮೃತ ದೇಹವನ್ನು ತೆರವುಗೊಳಿಸಿಲ್ಲ. ಬಳಿಕ ಈ ಮೃತ ದೇಹಕ್ಕೆ ಆಸ್ಪತ್ರೆ ಸಿಬ್ಬಂದಿಗಳು, ಬೆಡ್‌ ಶೀಟ್‌ ಹೊದಿಸಿ ಬ್ಯಾರಿಕೇಡ್‌ ಎಳೆದಿದ್ದಾರೆ.

 

 

Tags:
error: Content is protected !!