Mysore
25
scattered clouds

Social Media

ಬುಧವಾರ, 07 ಜನವರಿ 2026
Light
Dark

ʼಸಬರ್ಬನ್‌ ಬಸ್‌ ನಿಲ್ದಾಣʼ ಸ್ಥಳಾಂತರಕ್ಕೆ ತೀವ್ರ ವಿರೋಧ

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಸಬರ್ಬನ್‌ ಬಸ್‌ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡುವುದಕ್ಕೆ ನಗರದ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮೈಸೂರು ಕೆಎಸ್‌ಆರ್‌ಟಿಸಿ ಸಬರ್ನ್‌ ಬಸ್‌ ನಿಲ್ದಾಣ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ರವಿಶಾಸ್ತ್ರಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಸಬರ್ಬನ್‌ ಬಸ್‌ ನಿಲ್ದಾಣ, ಮೈಸೂರು ನಗರಕ್ಕೆ ಒಂದು ರೀತಿಯ ಕಳಸಪ್ರಾಯದಂತೆ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ಒಂದು ವೇಳೆ ಸ್ಥಳಾಂತರ ಮಾಡಿದರೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತದೆ. ಸಿಟಿ ಸೆಂಟರ್‌ನಲ್ಲಿರುವುದರಿಂದ ಎಲ್ಲದಕ್ಕೂ ಅನುಕೂಲವಾಗಿದೆ.

ಈಗಾಗಲೇ ನರ್ಮ್‌ ಯೋಜನೆಯಡಿ ಸಾತಗಳ್ಳಿ, ನಾಯ್ಡು ನಗರ, ಇಲವಾಲ, ಕುವೆಂಪು ನಗರ ಬಸ್‌ ಡಿಪೋ ಬಳಿ ನಿರ್ಮಾಣ ಮಾಡಿದ ಬಸ್‌ ನಿಲ್ದಾಣ ಎಲ್ಲವೂ ಕೂಡ ನಿಷ್ಕ್ರೀಯಗೊಂಡಿದ್ದು, ನೂರಾರು ಕೋಟಿ ವೆಚ್ಚ ಮಾಡಿ ನಿರ್ಮಿಸಿದ ನಿಲ್ದಾಣಗಳು ನಿರುಪಯುಕ್ತವಾಗಿವೆ. ಈಗ ಈ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡಿದರೆ ಇದರ ಬಳಕೆಯು ಕಡಿಮೆಯಾಗಬಹುದು.

ದಸರಾ ಸಂದರ್ಭದಲ್ಲಿ ಮಾತ್ರ ಸ್ವಲ್ಪ ತೊಂದರೆಯಾಗುತ್ತದೆ. ಉಳಿದ ಸಂದರ್ಭದಲ್ಲಿ ಏನೂ ಸಮಸ್ಯೆ ಅಗುವುದಿಲ್ಲ. ಸ್ಥಳಾಂತರ ಮಾಡುವ ಬದಲು ಪಕ್ಕದಲ್ಲೇ ಇರುವ ಪೀಪಲ್ಸ್‌ ಪಾರ್ಕ್‌ ಮತ್ತು‌ ಸರ್ಕಾರಿ ಗೆಸ್ಟ್ ಹೌಸ್‌ ಜಾಗವನ್ನು ಪಡೆದು ವಿಸ್ತರಿಸಬಹುದು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವರಿಗೂ ಮನವಿ ಮಾಡಿದ್ದೇವೆ. ಮನವಿಗೆ ಸಕರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷ ನಿಂಗರಾಜು, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಅದ್ಯಕ್ಷ ಬಿಎಸ್‌ ಪ್ರಶಾಂತ್‌ ಸೇರಿದಂತೆ ಹಲವರು ಹಾಜರಿದ್ದರು.

Tags:
error: Content is protected !!