ಮೈಸೂರು: ಆರ್‌ಸಿಬಿ ಗೆಲುವಿಗಾಗಿ ಕರ್ನಾಟಕ ಸೇನಾಪಡೆ ವತಿಯಿಂದ ಮೈಸೂರಿನ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೈಸೂರಿನ ಅಗ್ರಹಾರ ವೃತ್ತದ ಬಳಿಯಿರುವ ನೂರೊಂದು ಗಣಪತಿ ದೇವಸ್ಥಾನದ ಮುಂದೆ ಜಮಾಯಿಸಿದ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು, ಆರ್‌ಸಿಬಿ ಗೆಲುವಿಗಾಗಿ ನೂರೊಂದು ಈಡುಗಾಯಿ ಒಡೆದು ಜೈಕಾರ ಕೂಗಿ ಶುಭಕೋರಿದರು.
ಗೆಲ್ಲಲಿ ಗೆಲ್ಲಲಿ ಆರ್‌ಸಿಬಿ ಗೆಲ್ಲಲಿ, ಈ ಸಲ ಕಪ್ ನಮ್ದೆ, ಆರ್ಸಿಬಿ ತಂಡಕ್ಕೆ ಜಯವಾಗಲಿ ಎಂದು ಜೈಕಾರಗಳನ್ನು ಕೂಗಿ ಶುಭ ಹಾರೈಸಿದರು.





