Mysore
30
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಜೆಡಿಎಸ್‌ ಮುಖಂಡ ಪುತ್ರ ಆತ್ಮಹತ್ಯೆ| ಪ್ರತೀಪ್‌ ಸಾವಿಗೆ ಮಾನಸಿಕ ಕಿರುಕುಳವೇ ಕಾರಣ: ಸ್ನೇಹಮಯಿ ಕೃಷ್ಣ

ಮೈಸೂರು: ಜೆಡಿಎಸ್‌ ಮುಖಂಡನ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿಗೆ ಮಾನಸಿಕ ಕಿರುಕುಳವೇ ಕಾರಣ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು(ಜನವರಿ.19) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಹೋರಾಟ ನಡೆಸಿ ಶಿಕ್ಷೆ ಕೊಡಿಸಬೇಕಾಗಿದ್ದ ಜಾ.ದಳ ಮುಖಂಡ ಬೆಳವಾಡಿ ಶಿವಮೂರ್ತಿ, ಮಗನ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿ ಭವ್ಯ ಅವರನ್ನು ರಕ್ಷಣೆ ಮಾಡಲು ಸಹಕರಿಸಿ, ಸೊಸೆ ಮತ್ತು ಮೊಮ್ಮಕ್ಕಳಿಗೆ ಅನ್ಯಾಯ ಮಾಡಿ, ಸುಳ್ಳು ಮರಣಶಾಸನ ಸೃಷ್ಟಿಸಿಕೊಂಡು ಮಗನ ಆಸ್ತಿ ಕಬಳಿಸಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೃತ ಪ್ರತೀಪ್‌ ಎಂಬುವವರು ಬೆಳವಾಡಿ ಶಿವಮೂರ್ತಿ ಅವರ ಮಗರಾಗಿದ್ದು, ಅವರಿಗೆ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೂ ಸಹ ನಗರದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಉಪ ಪೊಲೀಸ್ ನಿರೀಕ್ಷಕಿಯಾಗಿದ್ದ ಭವ್ಯ ಅವರು ಆತನೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡು ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದುದ್ದಲ್ಲದೇ, ಎರಡನೇ ಮದುವೆಯಾಗಲು ಒಪ್ಪಿಗೆ ನೀಡುವಂತೆ ಪ್ರತೀಪ್‌ನ ಮನೆಯವರಿಗೆ ಅದರಲ್ಲೂ ಪ್ರತೀಪ್‌ನ ಪತ್ನಿ ನೇಹಾ ಅವರಿಗೆ ಒತ್ತಡ ಹಾಕಿದ್ದರು. ಆ ವೇಳೆ ಅವರು ಒಪ್ಪದ ಕಾರಣ, ಭವ್ಯ ಅವರು ಮದುವೆಯಾಗಲು ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಹೀಗಾಗಿ ಮಾನಸಿಕ ಒತ್ತಡಕ್ಕೆ ಒಳಗಾದ ಪ್ರತೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು.

ಮಗನ ಸಾವಿಗೆ ಕಾರಣರಾದ ಭವ್ಯ ಅವರನ್ನು ರಕ್ಷಣೆ ಮಾಡಲು ಶಿವಮೂರ್ತಿ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲದೇ ತಮ್ಮ ಮಗನ ಮೇಲೆ ಬಹಳ ಪ್ರೀತಿ, ಅಭಿಮಾನ ಇದೆ ಎಂಬಂತೆ ನಾಟಕವಾಡಿದ್ದಾರೆ.
ಆತನ ಸಾವಿನಿಂದ ಬಹಳ ನೊಂದಿದ್ದೇನೆ ಎಂಬಂತೆ ಸುಳ್ಳು ಮುಖವಾಡ ಧರಿಸಿ, ಪ್ರತೀಪ್‌ನ ತಾತ್ಕಾಲಿಕ ಪ್ರತಿಮೆ, ಸಮಾಧಿಯನ್ನು ಸ್ಥಾಪಿಸಿ, ಮಗನ ಶಾಶ್ವತ ಪ್ರತಿಮೆ ಮಾಡಲು ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಮುಂಗಡ ಹಣ ನೀಡಿದ್ದ ಬೆಳವಾಡಿ ಶಿವಮೂರ್ತಿ ನಾವೊಬ್ಬ ಗೋಮುಖ ವ್ಯಾಘ್ರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇನ್ನೂ ಸ್ವಂತ ಸೊಸೆ ನೇಹಾ ಹಾಗೂ ಮೊಮ್ಮಕ್ಕಳನ್ನು ಮನೆಯಿಂದ ಹೊರ ಹೋಗುವಂತೆ ಮಾಡಿರುವ ಶಿವಮೂರ್ತಿ ಮತ್ತು ಅವರ ಮನೆಯವರು, ಮಗನ ಸಾವಿಗೆ ಕಾರಣರಾದ ಭವ್ಯ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು, ಆಕೆಯೇ ನಿಜವಾದ ಸೊಸೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಭವ್ಯ ಅವರು ಕೂಡ ಮುದುವೆ ಆಗಿದೆ ಎಂಬಂತೆ ತಾಳಿ, ಕಾಲುಂಗರ ಹಾಕಿಕೊಂಡು ಶಿವಮೂರ್ತಿ ಅವರ ಮನೆ ಸೊಸೆ ಎಂಬಂತೆ ಬಿಂಬಿಸಿಕೊಂಡು ಮನೆಯ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ದೂರಿದರು.

ಈ ಪ್ರಕರಣದ ಸಂಬಂಧ ಶಿವಮೂರ್ತಿ ನೀಡಿರುವ ದೂರು ಅರ್ಜಿ, ನೇಹಾ ಮತ್ತು ಭವ್ಯ ಅವರ ಹೇಳಿಕೆಗಳು, ಮೃತ ಪ್ರತೀಪ್‌ನ ಹೆಸರಲ್ಲಿ ಸೃಷ್ಟಿಸಿಕೊಂಡಿರುವ ಮರಣ ಶಾಸನ ಪತ್ರ, ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಹಾಗೂ ದೂರು ಅರ್ಜಿಗಳನ್ನು ಜನವರಿ 16 ರಂದು ನಗರ ಪೊಲೀಸ್ ಆಯುಕ್ತರಿಗೆ ನೀಡಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಇನ್ನೂ ತನಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡದಂತೆ ತಡೆದಿರುವುದನ್ನು ಗಮನಿಸಿದಾಗ ರಾಜಕೀಯವಾಗಿ ಶಿವಮೂರ್ತಿ ಮತ್ತು ಪೊಲೀಸ್ ಅಧಿಕಾರಿಯಾಗಿ ಭವ್ಯರವರು ಎಷ್ಟು ಪ್ರಭಾವಿಗಳು ಎಂಬುದು ಗೊತ್ತಾಗುತ್ತದೆ. ಏನೇ ಆದರೂ ನೇಹಾ ಮತ್ತು ಅವರ ಮಕ್ಕಳಿಗೆ ನ್ಯಾಯ ಕೊಡಿಸಲು ಸಿದ್ಧರಾಗಿದ್ದೇನೆ ಎಂದು ತಿಳಿಸಿದರು.

Tags: