ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಮಾರ್ಗದರ್ಶಕರ ಕೊರತೆ ನೀಗಿಸಿ ಹೆಚ್ಚುವರಿ ಪಿಎಚ್.ಡಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಕ್ರಾಫಡ್ ಭವನ ಮುಂಭಾಗ ನಡೆಯುತ್ತಿರುವ ಧರಣಿ ಬುಧವಾರವು ಮುಂದುವರೆಯಿತು.
ಮಂಗಳವಾರ ಬೆಳಗಿನಿಂದಲೇ ಆರಂಭವಾದ ಪ್ರತಿಭಟನೆಗೆ ಅಧಿಕಾರಿಗಳು ಸೂಕ್ತವಾಗಿ ಸಂಬಂಧಿಸಿದ ಕಾರಣ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಚೋರನಹಳ್ಳಿ ಶಿವಣ್ಣ ಅವರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಲಾಯಿತು.
ಬೇಡಿಕೆ ಈಡೇರಿಸುವವಗೆರೆ ಧರಣಿ ಮುಂದುವರಿಸಲಾಗುವುದು. ವಿವಿ ಆಡಳಿತ ವಿಳಂಬ ಧೋರಣೆ ಅನುಸರಿಸಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಎಚ್ಚರಿಸಿದರು.
ಇನ್ನಷ್ಟು ಓದಿ ; ಪಿಎಚ್.ಡಿ ಮಾರ್ಗದರ್ಶಕರ ಕೊರೆತ ; ಮೈಸೂರು ವಿವಿ ವಿರುದ್ಧ ಅಹೋರಾತ್ರಿ ಧರಣಿ
ದಲಿತ ಸಂಘರ್ಷ ಸಮಿತಿಯ ಮಹದೇವು, ಸಂಶೋಧನಾ ವಿದ್ಯಾರ್ಥಿ ಪ್ರದೀಪ್ ಮುಮ್ಮಡಿ, ಸಂಶೋಧನಾ ಆಕಾಂಕ್ಷಿಗಳಾದ ಮಹೇಶ್, ರೋಹನ್, ನವೀನ್ ಅಳಗಂಜಿ, ನಂದೀಶ್, ಕರ್ಣ, ರವಿ, ರೋಜಾ ಮತ್ತಿತರರು ಪಾಲ್ಗೊಂಡಿದ್ದರು.



